ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಫಿರೌಜಾ ಎದುರು ಗೆದ್ದ ಆನಂದ್‌

Last Updated 25 ಜನವರಿ 2020, 19:38 IST
ಅಕ್ಷರ ಗಾತ್ರ

ವಿಜ್ಕ್‌ ಆ್ಯನ್‌ ಜೀ, ನೆದರ್ಲೆಂಡ್ಸ್‌: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ 11ನೇ ಸುತ್ತಿನಲ್ಲಿ ಗೆದ್ದಿದ್ದಾರೆ. ಟೂರ್ನಿಯಲ್ಲಿ ಆನಂದ್‌ಗೆ ಒಲಿದ ಎರಡನೇ ಜಯ ಇದಾಗಿದೆ.

ಶನಿವಾರ ನಡೆದ ಹಣಾಹಣಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್‌ ಆನಂದ್‌ ಅವರು 16 ವರ್ಷ ವಯಸ್ಸಿನ ಅಲಿರೆಜಾ ಫಿರೌಜಾ ಅವರನ್ನು ಮಣಿಸಿದರು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 5.5ಕ್ಕೆ ಹೆಚ್ಚಿಸಿಕೊಂಡು, ಪಟ್ಟಿಯಲ್ಲಿ ಜಂಟಿ ಆರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು ಎರಡು ಸುತ್ತುಗಳ ಆಟ ಬಾಕಿ ಇದೆ.

ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಫಾಬಿಯಾನೊ ಕರುವಾನ, ವ್ಲಾದಿಸ್ಲಾವ್‌ ಕೊವಾಲೆವ್‌ ಎದುರು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಕರುವಾನ ಖಾತೆಯಲ್ಲಿ ಒಟ್ಟು ಎಂಟು ಪಾಯಿಂಟ್ಸ್‌ ಇವೆ.

ನಾರ್ವೆಯ ಆಟಗಾರ, ಹಾಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಜಾನ್‌ ಡುಡಾ ವಿರುದ್ಧ ಡ್ರಾ ಮಾಡಿಕೊಂಡರು. ಏಳು ಪಾಯಿಂಟ್ಸ್‌ ಗಳಿಸಿರುವ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ರಷ್ಯಾದ ವ್ಲಾದಿಸ್ಲಾವ್‌ ಅರ್ಟೆಮೀವ್‌ ಅವರು ನೆದರ್ಲೆಂಡ್ಸ್‌ನ ಜೋರ್ಡನ್‌ ವಾನ್‌ ಫೊರೀಸ್ಟ್‌ ಅವರನ್ನು ಸೋಲಿಸಿ ಪೂರ್ಣ ಪಾಯಿಂಟ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT