ಶನಿವಾರ, ಸೆಪ್ಟೆಂಬರ್ 24, 2022
21 °C

CWG 2022 | ಟಿಟಿ: ಶರತ್–ಸತ್ಯನ್‌ಗೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ಅಚಂತಾ ಶರತ್‌ ಕಮಲ್‌ ಮತ್ತು ಜಿ.ಸತ್ಯನ್‌ ಅವರು ಟೇಬಲ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದರು.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಜೋಡಿ 11-8, 8-11, 3-11, 11-7, 4-11 ರಲ್ಲಿ ಇಂಗ್ಲೆಂಡ್‌ನ ಪಾಲ್‌ ಡ್ರಿಂಕ್‌ಹಾಲ್‌– ಲಿಯಾಮ್ ಪಿಚ್‌ಫೋರ್ಡ್‌ ಎದುರು ಸೋತರು.

2018ರ ಗೋಲ್ಡ್‌ಕೋಸ್ಟ್‌ ಕೂಟದ ಫೈನಲ್‌ನಲ್ಲೂ ಭಾರತದ ಜೋಡಿ ಇದೇ ಎದುರಾಳಿಗಳ ಎದುರು ಸೋತು ಬೆಳ್ಳಿ ಪಡೆದು ಕೊಂಡಿತ್ತು.

ಶ್ರೀಜಾಗೆ ನಿರಾಸೆ: ಶ್ರೀಜಾ ಅಕುಲಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದು ಕೊಂಡರು. ಮೂರನೇ ಸ್ಥಾನ ನಿರ್ಣಯಿಸಲು ನಡೆದ ಪಂದ್ಯದಲ್ಲಿ 3–4 ರಲ್ಲಿ ಆಸ್ಟ್ರೇಲಿಯಾದ ಯಾಂಗ್‌ ಜಿ ಲಿಯು ಎದುರು ಸೋತರು.

ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ ಭಾರತದ ಆಟಗಾರ್ತಿ ಅಂತಿಮವಾಗಿ 11-3, 6-11, 2-11, 11-7, 13-15, 11-9, 7-11 ರಲ್ಲಿ ಪರಾಭವಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು