ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿ: ಎರಡನೇ ಸ್ಥಾನದಲ್ಲಿ ಸಂತೋಷ್‌

Last Updated 9 ಮೇ 2019, 18:50 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಸಿ.ಎಸ್‌.ಸಂತೋಷ್‌, ರಾಜಸ್ಥಾನದ ಬಿಕಾನೇರ್‌ನಲ್ಲಿ ಆರಂಭವಾದ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿಯ ಮೊದಲ ಹಂತದ ಸ್ಪರ್ಧೆಯನ್ನು ಎರಡನೇಯವರಾಗಿ ಮುಗಿಸಿದ್ದಾರೆ.

250 ಸಿ.ಸಿ. ಮೇಲ್ಪಟ್ಟವರ ವಿಭಾಗದಲ್ಲಿ ಕಣಕ್ಕಿಳಿದಿರುವ ಸಂತೋಷ್‌, ಗುರುವಾರ ನಡೆದ 87 ಕಿ.ಮೀ. ವಿಶೇಷ ಹಂತದ ಸ್ಪರ್ಧೆಯನ್ನು 1 ಗಂಟೆ 7 ನಿಮಿಷ 23 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

ಹೀರೊ ಮೋಟರ್‌ ಸ್ಪೋರ್ಟ್ಸ್‌ ತಂಡವನ್ನು ಪ್ರತಿನಿಧಿಸಿರುವ ಸಂತೋಷ್‌, 41 ಕಿಲೊ ಮೀಟರ್ಸ್‌ ದೂರದ ಸ್ಪರ್ಧೆಯಲ್ಲಿ ಶರವೇಗದಲ್ಲಿ ಮೋಟರ್‌ ಬೈಕ್‌ ಚಲಾಯಿಸಿದರು. 46 ಕಿಲೊ ಮೀಟರ್ಸ್‌ ದೂರದ ಸ್ಪರ್ಧೆಯಲ್ಲೂ ಅಮೋಘ ಚಾಲನಾ ಕೌಶಲ ಮೆರೆದರು.

ಟಿವಿಎಸ್‌ ರೇಸಿಂಗ್‌ ತಂಡದ ಆ್ಯಡ್ರಿಯನ್ ಮೆಟ್ಗೆ ಮೊದಲಿಗರಾಗಿ ಗುರಿ ಕ್ರಮಿಸಿದರು. ನಿಗದಿತ ದೂರ ಕ್ರಮಿಸಲು ಅವರು 1 ಗಂಟೆ 5 ನಿಮಿಷ 03 ಸೆಕೆಂಡು ತೆಗೆದುಕೊಂಡರು.

ಟಿವಿಎಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸಿರುವ ಕರ್ನಾಟಕದ ಅಬ್ದುಲ್‌ ವಾಹೀದ್‌ ತನ್ವೀರ್‌ ಹಾಗೂ ಆರ್‌.ನಟರಾಜ್‌ ಅವರೂ ಉತ್ತಮ ಸಾಮರ್ಥ್ಯ ತೋರಿದರು.

ಮೈಸೂರಿನ ಅಬ್ದುಲ್‌ ವಾಹೀದ್‌ (1 ಗಂಟೆ 10 ನಿಮಿಷ 11 ಸೆಕೆಂಡು) ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು.

ನೆಲಮಂಗಲದ ನಟರಾಜ್‌ ನಾಲ್ಕನೇ ಸ್ಥಾನ ಪಡೆದರು. ಅವರು 1 ಗಂಟೆ 16 ನಿಮಿಷ 42 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಟಿವಿಎಸ್‌ ತಂಡದ ಇತರ ಸ್ಪರ್ಧಿಗಳಾದ ಆರ್‌.ಇ.ರಾಜೇಂದ್ರ ಮತ್ತು ಐಶ್ವರ್ಯ ಪಿಸ್ಸೆ ಕ್ರಮವಾಗಿ ಐದು ಮತ್ತು 23ನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.

ರಾಜೇಂದ್ರ ಅವರು 1 ಗಂಟೆ 17 ನಿಮಿಷ 32 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು.‌

ಎರಡನೇ ಲೆಗ್‌ನ ಸ್ಪರ್ಧೆಯು (116 +313ಕಿ.ಮೀ.) ಶುಕ್ರವಾರ ಬಿಕಾನೇರ್‌ನಲ್ಲಿ ಆರಂಭವಾಗಿ ಜೈಸಲ್ಮೇರ್‌ನಲ್ಲಿ ಮುಗಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT