ಸೋಮವಾರ, ಜೂನ್ 21, 2021
24 °C

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಸೈನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆಯತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ 21–10, 21–11ರ ನೇರ ಗೇಮ್‌ಗಳಲ್ಲಿ ಡೆನ್ಮಾರ್ಕ್‌ನ ಹಾಜ್‌ಮಾರ್ಕ್ ಕೇರಸ್‌ ಫೀಟ್‌ ವಿರುದ್ಧ ಜಯಿಸಿದರು. 27 ನಿಮಿಷಗಳ ಹೋರಾಟದಲ್ಲಿ ಸೈನಾ ಏಕಪಕ್ಷೀಯ ಗೆಲುವು ಸಾಧಿಸಿದರು. ಚುರುಕಾದ ರ‍್ಯಾಲಿ ಮತ್ತು ಶಕ್ತಿಶಾಲಿ ಸ್ಮ್ಯಾಷ್‌ಗಳನ್ನು ಹೊಡೆದ ಸೈನಾ ಪಾರಮ್ಯ ಮೆರೆದರು. 

ಟೂರ್ನಿಯ ಮೊದಲ ಸುತ್ತಿನಲ್ಲಿ ಸೈನಾ 23–21, 21–17ರಿಂದ ಹಾಂಗ್‌ಕಾಂಗ್‌ನ ಚೆಯಾಂಗ್ ಎಂಗಾನ್ ಯೀ ವಿರುದ್ಧ ಜಯಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು