ಫೈನಲ್‌ಗೆ ಜೋಷ್ನಾ, ಘೋಷಾಲ್‌

ಸೋಮವಾರ, ಮೇ 27, 2019
24 °C
ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌

ಫೈನಲ್‌ಗೆ ಜೋಷ್ನಾ, ಘೋಷಾಲ್‌

Published:
Updated:
Prajavani

ಕ್ವಾಲಾಲಂಪುರ: ಭಾರತದ ಜೋಷ್ನಾ ಚಿಣ್ಣಪ್ಪ ಮತ್ತು ಸೌರವ್‌ ಘೋಷಾಲ್ ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. 

ಶನಿವಾರ ನಡೆದ ಮಹಿಳೆಯ ಸಿಂಗಲ್ಸ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕಿತೆ ಜೋಷ್ನಾ ಚಿಣ್ಣಪ್ಪ, ಆರನೇ ಶ್ರೇಯಾಂಕಿತ ಮಲೇಷ್ಯಾ ಆಟಗಾರ್ತಿ ಶಿವಸಂಗ್ರಿ ಸುಬ್ರಮಣ್ಯಮ್‌ ವಿರುದ್ಧ 11–7, 12–10, 11–3ರಿಂದ ಗೆದ್ದರು.

ಪಂದ್ಯದ ಆರಂಭದಲ್ಲಿ ಶಿವಸಂಗ್ರಿ ಮೇಲುಗೈ ಸಾಧಿಸಿದ್ದರು. ಆದರೆ, ಪುಟಿದೆದ್ದ ಜೋಷ್ನಾ ಮುನ್ನಡೆ ಸಾಧಿಸಿ ಮೊದಲ ಗೇಮ್‌ ವಶಕ್ಕೆ ಪಡೆದರು. ಎರಡನೇ ಗೇಮ್‌ನಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು. ಆಕ್ರಮಣಕಾರಿಯಾಗಿ ಆಟ ಪ್ರದರ್ಶಿಸುತ್ತಿದ್ದ ಶಿವಸಂಗಾರಿ ಎದುರು ಜೋಷ್ನಾ ಜಾಣ್ಮೆಯ ಆಟ ಪ್ರದರ್ಶಿಸಿ 12–10ರಿಂದ ಗೇಮ್‌ ಅನ್ನು ವಶಪಡಿಸಿಕೊಂಡರು. ಮೂರನೇ ಗೇಮ್‌ ಅನ್ನು ಸುಲಭವಾಗಿ ಗೆದ್ದ ಜೋಷ್ನಾ ಫೈನಲ್‌ ಪ್ರವೇಶಿಸಿದರು. ಪ್ರಶಸ್ತಿಗಾಗಿ ಹಾಂಕಾಂಗ್‌ನ ಆ್ಯನಿ ವೂ ವಿರುದ್ಧ ಸೆಣಸಲಿದ್ದಾರೆ.  

ಸೌರವ್‌ಗೆ ಜಯ: ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸೌರವ್‌ ಘೋಷಾಲ್‌ ಅವರು ಮಲೇಷ್ಯಾದ ಎಯ್ನ್ ಯೋ ಅವರನ್ನು 11–2, 11–6, 11–4ರಿಂದ ಮಣಿಸಿದರು.

ನಿಖರ ರಿಟರ್ನ್‌ ಮತ್ತು ಡ್ರಾಪ್‌ಗಳಿಂದ ಮೂರು ಗೇಮ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದರು.

ಸೌರವ್‌ ಅವರ ಚುರುಕಿನ ಆಟಕ್ಕೆ ಕಂಗೆಟ್ಟ ಎಯ್ನ್ 32 ನಿಮಿಷಗಳಲ್ಲಿಯೇ ಪಂದ್ಯವನ್ನು ಒಪ್ಪಿಸಿದರು. 2016ರ ಜೂನಿಯರ್‌ ಚಾಂಪಿ ಯನ್‌ಷಿಪ್‌ ಫೈನಲ್‌ನಲ್ಲಿ ಸೌರವ್‌ ಘೋಷಾಲ್, ಎಯ್ನ್ ಯೋ ಅವರ ವಿರುದ್ಧ ಸೆಣಸಿದ್ದರು.

 ಭಾನುವಾರ ನಡೆಯುವ ಫೈನಲ್‌ನಲ್ಲಿ ಹಾಂಕಾಂಗ್‌ನ ಲಿಯೊ ವೂ ಚುನ್‌ ಮಿಂಗ್‌ ವಿರುದ್ಧ ಆಡಲಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !