ಶುಕ್ರವಾರ, ಅಕ್ಟೋಬರ್ 29, 2021
20 °C

ಮಡಿಕೇರಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಕಿ ಆಟಗಾರ ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಹಾಕಿ ಆಟಗಾರ ಕರಿನೆರವಂಡ ಸೋಮಣ್ಣ ಅವರ ವಿವಾಹವು ವಿರಾಜಪೇಟೆಯ ಕೊಡವ ಸಮಾಜದಲ್ಲಿ ಶುಕ್ರವಾರ ನಮೃತಾ ಅವರೊಂದಿಗೆ ನೆರವೇರಿತು. ವಧು – ವರ ಕೊಡವ ಉಡುಗೆಯಲ್ಲಿ ಮಿಂಚಿದರು.

ಕರಡ ಸಮೀಪದ ಪಾಲಂಗಾಲದ ಗ್ರಾಮದ ಕರಿನೆರವಂಡ ಕೆ. ಮಂದಪ್ಪ ಮತ್ತು ಇಂದಿರಾ ದಂಪತಿ ಪುತ್ರ ಸೋಮಣ್ಣ. ಗೋಣಿಕೊಪ್ಪಲು ಚೇಮಿರ ಬೆಳ್ಯಪ್ಪ ಮತ್ತು ಗೀತಾ ದಂಪತಿ ಪುತ್ರಿ ನಮೃತಾ.

ಏಷ್ಯನ್‌ ಕ್ರೀಡಾಕೂಟ, ಸುಲ್ತಾನ್ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಸೋಮಣ್ಣ ಪ್ರತಿನಿಧಿಸಿದ್ದರು. ರಾಷ್ಟ್ರದ ವಿವಿಧೆಡೆ ನಡೆದ ಟೂರ್ನಿಯಲ್ಲಿ ರಾಜ್ಯ ತಂಡವನ್ನೂ ಪ್ರತಿನಿಧಿಸಿದ್ದಾರೆ. ರಾಜ್ಯ ತಂಡಕ್ಕೆ ನಾಯಕರೂ ಆಗಿದ್ದರು.

ಪ್ರಸ್ತುತ ಕೆನರಾ ಬ್ಯಾಂಕ್ ಹಾಕಿ ತಂಡವನ್ನು ಪ್ರತಿನಿಧಿಸುತ್ತಿದ್ದು, ರಾಜ್ಯದ ಪುರುಷರ ಹಾಕಿ ತಂಡದ ತರಬೇತುದಾರರಾಗಿದ್ದಾರೆ. ಹಾಕಿ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿವಾಹ ಸಮಾರಂಭದಲ್ಲಿ ಹಾಕಿ ಆಟಗಾರರಾದ ವಿ.ಆರ್.ರಘುನಾಥ್, ಎಸ್.ವಿ.ಸುನಿಲ್, ಎಸ್.ಕೆ.ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ, ವಿಕ್ರಂಕಾಂತ್, ವಿ.ಎಸ್.ವಿನಯ್, ಪ್ರಧಾನ್ ಸೋಮಣ್ಣ, ಪಿ.ಎಲ್.ತಿಮ್ಮಣ್ಣ, ಎ.ಬಿ.ಚೀಯಣ್ಣ, ಭರತ್ ಚೆಟ್ರಿ, ಸಿ.ಎಸ್.ಪೂಣಚ್ಚ, ಕೆ.ಕೆ.ಪೂಣಚ್ಚ, ಬಿ.ಸಿ.ಪೂಣಚ್ಚ, ಪಿ.ಷಣ್ಮುಗಂ, ಎ.ಸಿ.ಕುಟ್ಟಪ್ಪ, ಆಭರಣ್ ಸುದೇವ್ ಹಾಗೂ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಪಾಲ್ಗೊಂಡು, ವಧು–ವರರಿಗೆ ಶುಭ ಹಾರೈಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು