ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಟೂರ್ನಿ: ಬೇರೆರ ತಂಡಕ್ಕೆ ಗೆಲುವು

Last Updated 26 ಮಾರ್ಚ್ 2023, 19:00 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಬೇರೆರ ಬಿಪಿನ್ ಬೋಪಣ್ಣ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನೊಂದಿಗೆ ಬೇರೆರ ತಂಡವು ಚಿಕ್ಕಂಡ ತಂಡದ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿತು.

ಸಮೀಪದ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಟೂರ್ನಿಯಲ್ಲಿ ಭಾನುವಾರ ಕಾಂಗಿರ ತಂಡ ಕಿರಿಯಮಾಡ ತಂಡದ ವಿರುದ್ಧ 1-0ಯಿಂದ, ಮಚ್ಚಾರಂಡ ತಂಡ ತೀತಿರ (ಹುದಿಕೇರಿ) ವಿರುದ್ಧ 5-1ರಿಂದ, ಮುಂಡಚಾಡಿರ ಪೋರಂ ಗಡ ವಿರುದ್ಧ 2-0ಯಿಂದ ಜಯ ಸಾಧಿಸಿತು.

ಚೆರುವಾಳಂಡ ತಂಡ ಮಾಪಂಗಡ ತಂಡದ ವಿರುದ್ಧ ಗೆದ್ದಿತು. ಮಾರ್ಚಂಡ ತಂಡವು ಮುಕ್ಕಾಟಿರ (ಮೂವತ್ತೋಕ್ಲು) ತಂಡದ ವಿರುದ್ಧ 3- 1, ಕುಲ್ಲಚಂಡ ತಂಡವು ಬಾಳೆಯಡ ವಿರುದ್ಧ 2-1 ಮತ್ತು ಕಳ್ಳಿಚಂಡ ಮೇವಡ ತಂಡದ ವಿರುದ್ಧ 2-0 ಅಂತರದ ಜಯ ಸಾಧಿಸಿದವು. ಐನಂಡ ತಂಡ ಅಲ್ಲಪಂಡ ವಿರುದ್ಧ 3- 2ರಿಂದ, ಮಾಚಿಮಂಡ 2-1ರಿಂದ ಚೊಟ್ಟೆಯಂಡ ವಿರುದ್ಧ, ಕಲಿಯಂಡ ತಂಡ ಕೇತಿರ ತಂಡದ ವಿರುದ್ಧ 6-0 ಯಿಂದ, ಕಾವಡಿ ಚಂಡ ತಂಡ ಮದ್ರೀರ ತಂಡದ ವಿರುದ್ಧ 3-1 ಅಂತರದಿಂದ ಜಯಿಸಿತು.

ಟೈ ಬ್ರೇಕರ್‌ನಲ್ಲಿ ಚಪ್ಪಂಡ 8-7 ರಿಂದ ಕಲ್ಲು ಮಾಡಂಡ ವಿರುದ್ಧ, ಮಾದಂಡ ತಂಡದ ವಿರುದ್ಧದ ಪಂದ್ಯ ದಲ್ಲಿ ಕರವಂಡ 2-1 ಅಂತರದಿಂದ ಜಯ ಸಾಧಿಸಿತು.ಮುಕ್ಕಾಟಿರ (ಕಡಗದಾಳು) ತಂಡವು ಅಮ್ಮಂಡ ವಿರುದ್ಧ 3-2, ಕೊಂಡಿರ ತಂಡವು ಮೂಕಚಂಡ ವಿರುದ್ಧ 3-1, ತೀತಿಮಾಡ ತಂಡವು ನಾಗಂಡ ವಿರುದ್ಧ 1-0, ಮಾತಂಡ 5-ರಿಂದ ಕಬ್ಬಚ್ಚಿರ ತಂಡದ ವಿರುದ್ಧ, ಚೇನಂಡ ತಂಡ ತಿರೋಡಿರ ವಿರುದ್ಧ 5-0,ಕೊಲ್ಲೀರ ಮತ್ತು ನೆಲ್ಲಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಲೀರ ಮುನ್ನಡೆ ಸಾಧಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT