ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಪ್ರೊ ಲೀಗ್: ಭಾರತಕ್ಕೆ ಆಸ್ಟ್ರೇಲಿಯಾ ಸವಾಲು

ಭುವನೇಶ್ವರದಲ್ಲಿ ಇಂದು–ನಾಳೆ ಪಂದ್ಯಗಳು
Last Updated 20 ಫೆಬ್ರುವರಿ 2020, 23:19 IST
ಅಕ್ಷರ ಗಾತ್ರ

ಭುವನೇಶ್ವರ: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಲೀಗ್‌ನ ಪಂದ್ಯಗಳಲ್ಲಿ ಮೊದಲ ಯತ್ನದಲ್ಲೇ ಭಾರತ ಗಮನ ಸೆಳೆಯುವಂಥ ಪ್ರದರ್ಶನ ನೀಡಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ಕಳಿಂಗ ಕ್ರೀಡಾಂಗ ಣದಲ್ಲಿ ನಡೆಯುವ ಪಂದ್ಯದಲ್ಲೂ ಮನ್‌ಪ್ರೀತ್‌ ಸಿಂಗ್ ಪಡೆ ಯಶಸ್ಸಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

ಚೊಚ್ಚಲ ಎಫ್‌ಐಎಚ್‌ ಲೀಗ್‌ನಲ್ಲಿ ಅಮೋಘ ಆರಂಭ ಮಾಡಿರುವ ಭಾರತ ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಸಂಗ್ರಹಿಸಿದೆ. ಪ್ರಸ್ತುತ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಪ್ರಬಲ ನೆದರ್ಲೆಂಡ್ಸ್‌ ವಿರುದ್ಧ ಗರಿಷ್ಠ ಆರು ಪಾಯಿಂಟ್‌ಗಳ ಪೈಕಿ ಭಾರತ ಐದು ಪಾಯಿಂಟ್ಸ್‌ ಪಡೆದಿತ್ತು. ಹಾಲಿ ವಿಶ್ವ ಮತ್ತು ಯುರೋಪಿಯನ್‌ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಆಡಿದ ಎರಡುಪಂದ್ಯಗಳಲ್ಲಿ ಮೊದಲನೆಯದರಲ್ಲಿ 2–1 ಗೋಲುಗಳ ಅಚ್ಚರಿಯ ಗೆಲುವು ಸಾಧಿಸಿತ್ತು. ಆದರೆ ‘ರೆಡ್ ಲಯನ್ಸ್‌’ ಪಡೆ ಎರಡನೇ ಪಂದ್ಯದಲ್ಲಿ ಆತಿಥೇಯರಿಗೆ ತಿರುಗೇಟು ನೀಡಿ 3–2 ಅಂತರದಲ್ಲಿ ಜಯಗಳಿಸಿತ್ತು.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಲೆಗ್‌ ಪಂದ್ಯ ಶನಿವಾರ ಇಲ್ಲಿಯೇ ನಡೆಯಲಿದೆ. ನಂತರ ಮುಂದಿನ ಎರಡು ಪಂದ್ಯಗಳನ್ನು ದೇಶದಿಂದ ಹೊರಗೆ ಆಡಬೇಕಾಗಿದೆ.

‌ಆದರೆಇತ್ತೀಚಿನ ಅಂಕಿಅಂಶಗ ಳನ್ನು ನೋಡಿದರೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತದ ಸಾಧನೆನಿರಾಶಾದಾಯಕವಾಗಿದೆ. ವಿಶ್ವ ಕ್ರಮಾಂಕದಲ್ಲಿ ಹಾಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಭಾರತ ವಿರುದ್ಧ ಆಡಿರುವ ಕೊನೆಯ 30 ಪಂದ್ಯಗಳಲ್ಲಿ 22ರಲ್ಲಿ ಜಯಗಳಿಸಿದೆ. ಭಾರತ ಪ್ರಸ್ತುತ ವಿಶ್ವ ಕ್ರಮಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 2016ರಲ್ಲಿ ಬೆಂಡಿಗೊದಲ್ಲಿ ನಡೆದ ಟೆಸ್ಟ್‌ ಪಂದ್ಯವನ್ನು ಆಸ್ಟ್ರೇಲಿಯಾ ಕೊನೆಯ ಬಾರಿ ಸೋತಿತ್ತು. ಭಾರತ ತಂಡದ 3–2 ಗೆಲುವಿನಲ್ಲಿ ವಿ.ಆರ್.ರಘುನಾಥ್‌ ಎರಡು ಗೋಲುಗಳನ್ನು ಗಳಿಸಿದ್ದರು.

ಕಳಿಂಗ ಕ್ರೀಡಾಂಗಣದಲ್ಲೂ ಕಾಂಗರೂಗಳ ಸಾಧನೆ ಅಮೋಘವಾಗಿದೆ. 2014ರಲ್ಲಿ ಹೀರೊ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ ಆಸ್ಟ್ರೇಲಿಯಾ ಕಡೆಯ ಬಾರಿ ಕಳಿಂಗ ಕ್ರೀಡಾಂಗಣದಲ್ಲಿ ಸೋಲನುಭವಿಸಿತ್ತು.

2017ರ ಹಾಕಿ ವಿಶ್ವ ಲೀಗ್‌ನಲ್ಲಿ ಚಾಂಪಿಯನ್‌ ಆಗುವ ಹಾದಿಯಲ್ಲಿ ಆಸ್ಟ್ರೇಲಿಯನ್ನರು ಆಡಿದ ಎಲ್ಲ ಆರೂ ಪಂದ್ಯಗಳನ್ನು ಜಯಿಸಿದ್ದರು. 2018ರ ಹಾಕಿ ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಕಾಂಗರೂ ಪಡೆ ಐದರಲ್ಲಿ ಜಯಗಳಿಸಿತ್ತು. ಸೆಮಿಫೈನಲ್‌ ಪಂದ್ಯದ ನಿಗದಿ ಅವಧಿಯ ಆಟ 2–2 ಸಮನಾದ ನಂತರ ಶೂಟೌಟ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಸೋಲು ಕಂಡಿತ್ತು.

ಎಫ್‌ಐಎಚ್‌ ‘ವರ್ಷದ ತರಬೇತುದಾರ’ ಎನಿಸಿರುವ ಕಾಲಿನ್‌ ಬಾಚ್‌ ಮಾರ್ಗದರ್ಶನದ ಈ ತಂಡ, ಬ್ರಿಟನ್‌ ವಿರುದ್ಧ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಉತ್ತಮ ಸಾಧನೆ ತೋರಿದ ಹುಮ್ಮಸ್ಸಿನಲ್ಲಿ ಇಲ್ಲಿಗೆ ಬಂದಿದೆ. ಬ್ರಿಟನ್‌ ವಿರುದ್ಧ ಗರಿಷ್ಠ ಆರು ಪಾಯಿಂಟ್‌ಗಳ ಪೈಕಿ ಐದು ಪಡೆದಿತ್ತು.

ಆಸ್ಟ್ರೇಲಿಯಾಸದ್ಯ ನಾಲ್ಕು ಪಂದ್ಯ ಗಳಿಂದ ಆರು ಪಾಯಿಂಟ್ಸ್‌ ಸಂಗ್ರಹಿಸಿ ಐದನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ವಿರುದ್ಧ ಆಡಿದ ನಂತರ ಭಾರತ ತನ್ನ ಮುಂದಿನ ಪಂದ್ಯಗಳನ್ನು ಜರ್ಮನಿ (ಏಪ್ರಿಲ್‌ 25 ಮತ್ತು 26) ಮತ್ತು ಬ್ರಿಟನ್‌ (ಮೇ 2 ಮತ್ತು 3) ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT