ಭಾನುವಾರ, ಮಾರ್ಚ್ 7, 2021
22 °C
ಕೋವಿಡ್‌–19 ಕಾಲದಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಟೂರ್ನಿ

ಭಾರತದ ಶೂಟರ್‌ಗಳ ಮೇಲೆ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೈರೊ: ಈಜಿಪ್ಟ್‌ನ ಕೈರೊದಲ್ಲಿ ಅಂತರರಾಷ್ಟ್ರೀಯ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಬುಧವಾರ ವೇದಿಕೆ ಸಜ್ಜುಗೊಂಡಿದೆ. ಕೋವಿಡ್–19 ಕಾಲದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫಡರೇಷನ್‌ ( ಐಎಸ್‌ಎಸ್‌ಎಫ್) ಸ್ಪರ್ಧೆ ಇದಾಗಿದ್ದು, ಭಾರತದ 13 ಮಂದಿಯ ತಂಡವು ಮಿಂಚುವ ನಿರೀಕ್ಷೆಯಿದೆ. ಬಹುತೇಕ ಒಂದು ವರ್ಷದ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್ ಕೂಟ ನಡೆಯುತ್ತಿದೆ.

ಎಂಟು ದಿನಗಳ ಟೂರ್ನಿ ಇದಾಗಿದ್ದು, ಮೊದಲ ದಿನ ಪುರುಷ ಮತ್ತು ಮಹಿಳೆಯರ ವಿಭಾಗದ ಸ್ಕೀಟ್ ಸ್ಪರ್ಧೆಗಳ ಮೂಲಕ ಆರಂಭವಾಗಲಿದೆ. ಒಟ್ಟು 10 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

33 ದೇಶಗಳ 191 ಶೂಟರ್‌ಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕಳೆದ ವರ್ಷ ಐಎಸ್‌ಎಸ್‌ಎಫ್‌ ರೂಪಿಸಿರುವ, ತಂಡ ವಿಭಾಗಗಳ ಹೊಸ ಮಾದರಿಯನ್ನು ಮೊದಲ ಬಾರಿ ಇಲ್ಲಿ ಪರಿಚಯಿಸಲಾಗುತ್ತಿದೆ.

ವಿಶ್ವ ರ‍್ಯಾಂಕಿಂಗ್ ಪಾಯಿಂಟ್ಸ್ ಆಧಾರದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಕೊನೆಯ ಅವಕಾಶ ಆಗಿರುವುದರಿಂದ ಕೈರೊ ವಿಶ್ವಕಪ್‌ ಇನ್ನಷ್ಟು ಮಹತ್ವ ಎನಿಸಿದೆ.

ಭಾರತದ ಪುರುಷರ ಸ್ಕೀಟ್ ತಂಡದಲ್ಲಿ ಅಂಗದ್ ಬಾಜ್ವಾ, ಮೈರಾಜ್ ಅಹಮ್ಮದ್ ಖಾನ್‌ ಹಾಗೂ ಗುರುಜೋವತ್ ಖಂಗುರಾ ಇದ್ದಾರೆ. ಗನೆಮತ್ ಶೆಕೋನ್‌, ಪರಿನಾಜ್ ಧಲಿವಾಲ್‌ ಹಾಗೂ ಕಾರ್ತಿಕಿ ಸಿಂಗ್ ಅವರು ಮಹಿಳಾ ತಂಡದಲ್ಲಿದ್ದು ಪದಕಗಳಿಗೆ ಗುರಿಯಿಡಲಿದ್ದಾರೆ.

‘ಇದು ಈ ವರ್ಷದ ಮೊದಲ ವಿಶ್ವಕಪ್ ಟೂರ್ನಿಯಾಗಿದ್ದು, ಕೋವಿಡ್–19 ಲಾಕ್‌ಡೌನ್ ಬಳಿಕ ನಡೆಯುತ್ತಿರುವುದಿಂದ ಮಹತ್ವ ಎನಿಸಿದೆ. ಈ ಟೂರ್ನಿಯ ಮೂಲಕ ಶುಭಾರಂಭವನ್ನು ನಿರೀಕ್ಷಿಸುತ್ತಿದ್ದೇವೆ‘ ಎಂದು ಭಾರತ ಶಾಟ್‌ಗನ್ ತಂಡದ ಮುಖ್ಯ ಕೋಚ್‌ ಮನ್‌ಶೇರ್ ಸಿಂಗ್ ಹೇಳಿದ್ದಾರೆ.

‘ಹತ್ತೂ ವಿಭಾಗಗಳ ಫೈನಲ್ಸ್‌ಗಳನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುವುದು‘ ಎಂದು ಐಎಸ್‌ಎಸ್ಎಫ್‌ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು