ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೇನ್‌, ಸೈನಾ ಶುಭಾರಂಭ

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 25 ಜನವರಿ 2023, 18:55 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಸೈನಾ ನೆಹ್ವಾಲ್ ಮತ್ತು ಲಕ್ಷ್ಯ ಸೇನ್‌ ಅವರು ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಮಾಸ್ಟರ್ಸ್‌ ಸೂಪರ್‌ 500
ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೇನ್‌ ಅವರು 21–12, 21–11 ರಲ್ಲಿ ಜಪಾನ್‌ನ ಕೊಡೈ ನರವೊಕಾ ಅವರನ್ನು ಮಣಿಸಿದರು. ಭಾರತದ ಅಟಗಾರ ಎರಡೂ ಗೇಮ್‌ಗಳಲ್ಲಿ ಶಿಸ್ತಿನ ಪ್ರದರ್ಶನ ನೀಡಿದರು.

ಸೇನ್‌ ಅವರು ಮಲೇಷ್ಯಾ ಓಪನ್‌ ಮತ್ತು ಇಂಡಿಯಾ ಓಪನ್‌ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದರು. ಆದರೆ ನರವೊಕಾ ವಿರುದ್ಧ ಉತ್ತಮ ಲಯದಲ್ಲಿ ಆಡಿದರು. ವೇಗದ ಸ್ಮ್ಯಾಷ್‌ಗಳು ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದರು. ಏಳನೇ ಶ್ರೇಯಾಂಕದ ಸೇನ್‌ ಅವರು ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಎಂಗ್‌ ತ್ಸೆ ಯೊಂಗ್‌ ವಿರುದ್ಧ ಪೈಪೋಟಿ ನಡೆಸುವರು.

ಸೈನಾ ನೆಹ್ವಾಲ್‌ ಅವರಿಗೆ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ತಡೆ ದಾಟಲು ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಅವರು 21-15 17-21 21-15 ರಲ್ಲಿ ಚೀನಾ ತೈಪೆಯ ಪಾಯ್ ಯು ಪೊ ಅವರನ್ನು ಮಣಿಸಿದರು.

ಕೆ.ಶ್ರೀಕಾಂತ್‌ ಅವರು ಮೊದಲ ಸುತ್ತಿನಲ್ಲೇ ಸೋತರು. ಶೆಶನ್‌ ಹಿರೆನ್ ರುತ್ಸವಿಟೊ 21–10, 24–22 ರಲ್ಲಿ ಭಾರತದ ಆಟಗಾರನ ವಿರುದ್ಧ ಗೆದ್ದರು. ಶ್ರೀಕಾಂತ್‌ ಎರಡನೇ ಗೇಮ್‌ನಲ್ಲಿ 18–15 ರಲ್ಲಿ ಮುನ್ನಡೆಯಲ್ಲಿದ್ದರು. ಆ ಬಳಿಕ ಆಟದ ಮೇಲಿನ ಹಿಡಿತ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT