ಮಂಗಳವಾರ, ಮಾರ್ಚ್ 28, 2023
23 °C
ಐಎಸ್‌ಎಸ್‌ಎಫ್‌ ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಟೂರ್ನಿ

ಶೂಟಿಂಗ್ ಟೂರ್ನಿ: ಸೌರಭ್‌ ಚೌಧರಿಗೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಕ್ಲಾ, ಪೋಲೆಂಡ್‌: ಭಾರತದ ಸೌರಭ್ ಚೌಧರಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಪ್ರೆಸಿಡೆಂಟ್ಸ್ ಕಪ್ ಶೂಟಿಂಗ್ ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

ಶನಿವಾರ ರಾತ್ರಿ ನಡೆದ ಪುರುಷರ 10 ಮೀಟರ್ಸ್ ಏರ್ ಪಿಸ್ತೂಲು ಸ್ಪರ್ಧೆಯಲ್ಲಿ ಅವರು 24 ಸ್ಕೋರ್‌ನೊಂದಿಗೆ ಎರಡನೇ ಸ್ಥಾನ ಗಳಿಸಿದರು. ಭಾರತದವರೇ ಆದ ಅಭಿಷೇಕ್‌ ವರ್ಮಾ (21 ಸ್ಕೋರ್‌) ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಈ ವಿಭಾಗದ ಚಿನ್ನದ ಪದಕವು ಜರ್ಮನಿಯ ರಿಯಟ್ಜ್ ಅವರ ಪಾಲಾಯಿತು. ಫೈನಲ್‌ನಲ್ಲಿ ಅವರು 34 ಸ್ಕೋರ್ ದಾಖಲಿಸಿದರು.

ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಇರಾನ್‌ನ ಶೂಟರ್‌ ಜವಾದ್‌ ಫರೋಗಿ ಇಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು.

ಅರ್ಹತಾ ಸುತ್ತಿನಲ್ಲಿ ಸೌರಭ್ ಹಾಗೂ ಅಭಿಷೇಕ್‌ ಕ್ರಮವಾಗಿ 581 ಹಾಗೂ 580 ಪಾಯಿಂಟ್ಸ್ ದಾಖಲಿಸಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿ ಫೈನಲ್‌ ತಲುಪಿದ್ದರು.

ಭಾರತದ ಮನು ಭಾಕರ್ ಮತ್ತು ಜವಾದ್‌ ಫರೋಗಿ ಜೋಡಿ ಶುಕ್ರವಾರ ಏರ್ ಪಿಸ್ತೂಲು ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಈ ಜೋಡಿಯು ಫೈನಲ್‌ನಲ್ಲಿ ಫ್ರಾನ್ಸ್ ಮತ್ತು ರಷ್ಯಾದ ಮಥಿಲ್ಡೆ ರಮೊಲಿ ಮತ್ತು ಆರ್ಟೆಮ್ ಚೆರ್ನೊಸೊವ್‌ ಅವರನ್ನು 16–8ರಲ್ಲಿ ಮಣಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.