ಗುರುವಾರ , ಸೆಪ್ಟೆಂಬರ್ 29, 2022
26 °C
ಜೂಲಿಯಸ್‌ ಬಾರ್‌ ಆನ್‌ಲೈನ್ ಚೆಸ್‌ ಟೂರ್ನಿ: ಪ್ರಗ್ನಾನಂದ ಸ್ಥಾನ ಸ್ಥಿರ

ಆನ್‌ಲೈನ್ ಚೆಸ್‌ ಟೂರ್ನಿ: ಅಗ್ರಸ್ಥಾನದಲ್ಲಿ ಅರ್ಜುನ್‌ ಎರಿಗೈಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಭಾರತದ ಅರ್ಜುನ್ ಎರಿಗೈಸಿ ಅವರು ಜೂಲಿಯಸ್‌ ಬಾರ್ ಕಪ್‌ ಆನ್‌ಲೈನ್ ಚೆಸ್‌ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆರ್‌. ಪ್ರಗ್ನಾನಂದ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಎಂಟು ಸುತ್ತಿನ ಬಳಿಕ ಅರ್ಜುನ್ ಅವರ ಬಳಿ 17 ಪಾಯಿಂಟ್ಸ್ ಇದ್ದರೆ, ಪ್ರಗ್ನಾನಂದ 15 ಪಾಯಿಂಟ್ಸ್ ಕಲೆಹಾಕಿದ್ದರು.

ಬಹುನಿರೀಕ್ಷಿತ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಅವರೊಂದಿಗೆ ಡ್ರಾ ಸಾಧಿಸಿದರು. ಈ ಋತುವಿನ ಎರಡು ಆನ್‌ಲೈನ್ ಟೂರ್ನಿಗಳಲ್ಲಿ ಭಾರತದ ಆಟಗಾರ, ಕಾರ್ಲ್‌ಸನ್ ಅವರನ್ನು ಮಣಿಸಿದ್ದರು.

ಮಂಗಳವಾರ ಎರಡನೇ ದಿನದ ಪಂದ್ಯಗಳ ಅಂತ್ಯಕ್ಕೆ ಕಾರ್ಲ್‌ಸನ್ ಕೂಡ ಎರಡನೇ ಸ್ಥಾನದಲ್ಲಿದ್ದರು.

ದಿನದ ಮೊದಲ ಪಂದ್ಯದಲ್ಲಿ ಅರ್ಜುನ್‌ ಅವರು ಅಮೆರಿಕದ ಹಾನ್ಸ್ ನೀಮನ್‌ ಎದುರು ಗೆದ್ದರೆ ಬಳಿಕ ಅದೇ ದೇಶದ ಲೆವೊನ್‌ ಅರೊನಿಯನ್ ಅವರನ್ನು ಸೋಲಿಸಿದರು.

ಮೂರನೇ ಪಂದ್ಯದಲ್ಲಿ ಅರ್ಜುನ್‌ ಮತ್ತು ಪ್ರಗ್ನಾನಂದ ಸೆಣಸಾಟ ನಡೆಸಿದರು. 67 ನಡೆಗಳ ಈ ಪಂದ್ಯದಲ್ಲಿ ಭಾರತದ ಇಬ್ಬರೂ ಆಟಗಾರರು ಪಾಯಿಂಟ್ಸ್ ಹಂಚಿಕೊಂಡರು. ಎಂಟನೇ ಮತ್ತು ದಿನದ ಕೊನೆಯ ಸುತ್ತಿನಲ್ಲಿ ಅರ್ಜುನ್‌, ಕ್ರೊವೇಷ್ಯಾದ ಇವಾನ್ ಸ್ಟಾರಿಚ್‌ ಎದುರು ಡ್ರಾ ಸಾಧಿಸಿದರು.

ದಿನದ ಮೊದಲ ಪಂದ್ಯದಲ್ಲಿ ಪ್ರಗ್ನಾನಂದ ಅವರು ಪೋಲೆಂಡ್‌ನ ರಾಡೊಸ್ಲಾವ್‌ ವೊಜ್‌ತಾಸೆಕ್ ಅವರೊಂದಿಗೆ ಡ್ರಾ ಸಾಧಿಸಿದರು. ಬಳಿಕ ತನಗಿಂತ ಹೆಚ್ಚಿನ ರ‍್ಯಾಂಕಿನ ಜರ್ಮನಿ ಆಟಗಾರ ವಿನ್ಸೆಂಟ್ ಕೇಮರ್ ಅವರನ್ನು ಮಣಿಸಿದರು. ಬಳಿಕ 67 ನಡೆಗಳ ಪಂದ್ಯದಲ್ಲಿ ಕಾರ್ಲ್‌ಸನ್ ಎದುರು ಸಮಬಲ ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು