ಗುರುವಾರ , ನವೆಂಬರ್ 21, 2019
20 °C

ಜೂನಿಯರ್ ಕಬಡ್ಡಿ ವಿಶ್ವಕಪ್‌ ಟೂರ್ನಿ: ರೋಹಿತ್‌ ಆಯ್ಕೆ

Published:
Updated:
Prajavani

ಕುಮಟಾ: ಇಲ್ಲಿನ ರೋಹಿತ್ ನಾಯ್ಕ ಥಾಯ್ಲೆಂಡ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಜೂನಿಯರ್ ಕಬಡ್ಡಿ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರೋಹಿತ್ ಅವರು ಬಾಳಿಗಾ ಕಲಾ– ವಿಜ್ಞಾನ ಪದವಿಪೂರ್ವ ಕಾಲೇ ಜಿನ ಪ್ರಥಮ ಪಿಯು ವಿದ್ಯಾರ್ಥಿ. 17 ವರ್ಷ ವಯಸ್ಸಿನೊಳಗಿನ ಮೂರನೇ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.

ಜುಲೈ 23, 24ರಂದು ಉತ್ತರ ಪ್ರದೇಶದಲ್ಲಿ ನಡೆದಿದ್ದ ರಾಜೀವ್ ಗಾಂಧಿ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು.

ಪ್ರತಿಕ್ರಿಯಿಸಿ (+)