ಗುರುವಾರ , ಏಪ್ರಿಲ್ 15, 2021
24 °C

ಇಂದಿನಿಂದ ಅಮೆರಿಕ ಓಪನ್‌ ಬ್ಯಾಡ್ಮಿಂಟನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಫುಲ್ಲರ್ಟನ್‌, ಅಮೆರಿಕ: ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮವಾಗಿ ಆಡಿರುವ ಪರುಪಳ್ಳಿ ಕಶ್ಯಪ್‌, ಮಂಗಳವಾರ ಆರಂಭವಾಗಲಿರುವ ಅಮೆರಿಕ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಸುಮಾರು ಒಂದು ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ಕಶ್ಯಪ್‌ ಆಡಲಿದ್ದಾರೆ. ಆರನೇ ಶ್ರೇಯಾಂಕ ಪಡೆದಿರುವ ಅವರು ಮೊದಲ ಪಂದ್ಯದಲ್ಲಿ ಸ್ವದೇಶದ ಆಟಗಾರ ಲಕ್ಷ್ಯಸೇನ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. 

2017ರ ಟೂರ್ನಿಯಲ್ಲಿ ಇಲ್ಲಿ ಚಾಂಪಿಯನ್‌ ಕಿರೀಟ ಧರಿಸಿದ್ದ ಎಚ್‌.ಎಚ್‌. ಪ್ರಣಯ್‌ ಭಾರತದ ಮತ್ತೊಂದು ಭರವಸೆಯಾಗಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ಅವರು ಮೊದಲ ಪಂದ್ಯದಲ್ಲಿ ಜಪಾನ್‌ ಆಟಗಾರ ಯು ಇಗರಶಿ ಅವರಿಗೆ ಮುಖಾಮುಖಿಯಾಗುವರು.

ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮಾ, ಅಜಯ್‌ ಜಯರಾಂ ಕೂಡ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಅನುರಾ ಪ್ರಭುದೇಸಾಯಿ, ಶ್ರೀಕೃಷ್ಣ ಪ್ರಿಯಾ ಕುದರವಳ್ಳಿ ಸ್ಪರ್ಧೆಗೆ ಸಿದ್ಧವಾಗಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ–ಬಿ. ಸುಮಿತ್‌ ರೆಡ್ಡಿ ಕಣಕ್ಕಿಳಿಯುವರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು