ಶನಿವಾರ, ಮಾರ್ಚ್ 25, 2023
25 °C

ಹಾಫ್‌ ಮ್ಯಾರಥಾನ್‌: ಕೆನ್ಯಾದ ಪೆರೆಸ್‌ ವಿಶ್ವದಾಖಲೆ

ಎಪಿ Updated:

ಅಕ್ಷರ ಗಾತ್ರ : | |

Peres Jepchirchir

ಪ್ರಾಗ್‌, ಜೆಕ್‌ ಗಣರಾಜ್ಯ: ಕೆನ್ಯಾದ ಪೆರೆಸ್‌ ಜೆಪ್‌ಚಿರ್‌ಚಿರ್‌ ಅವರು ಇಲ್ಲಿ ನಡೆದ ಮಹಿಳಾ ಹಾಪ್‌ ಮ್ಯಾರಥಾನ್‌ನಲ್ಲಿ ಶನಿವಾರ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಿಗದಿತ ದೂರವನ್ನು ಅವರು 1 ತಾಸು ಐದು ನಿಮಿಷ, 34 ಸೆಕೆಂಡುಗಳಲ್ಲಿ ಕ್ರಮಿಸಿದರು.

ಕೆಲವೇ ಅಥ್ಲೀಟ್‌ಗಳು ಭಾಗವಹಿಸಿದ್ದ 16.5 ಸುತ್ತುಗಳ ಮ್ಯಾರಥಾನ್‌ನಲ್ಲಿ ಪೆರೆಸ್‌ ಮೊದಲಿಗರಾದರು.

ಈ ಹಿಂದಿನ ದಾಖಲೆ ಇಥಿಯೋಪಿಯಾದ ನೆತ್ಸಾನೆಟ್‌ ಗುಡೆಟಾ (1 ತಾಸು, 6 ನಿಮಿಷ, 11 ಸೆಕೆಂಡುಗಳು) ಅವರ ಹೆಸರಿನಲ್ಲಿತ್ತು. 2018ರಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ವಿಶ್ವ ಹಾಫ್‌ ಮ್ಯಾರಥಾನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. 

‘ರೇಸ್‌ಅನ್ನು ನಾನು 1 ತಾಸು 4 ನಿಮಿಷ 50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದು ಎಂದುಕೊಂಡಿದ್ದೆ. ಆದರೂ ತುಂಬಾ ಖುಷಿಯಾಗಿದೆ‘ ಎಂದು ಪೆರೆಸ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು