ಖೇಲೊ ಇಂಡಿಯಾ: ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಯ ಲಕ್ಷ್ಮಿಗೆ ಚಿನ್ನ
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಶುಭಾರಂಭ ಮಾಡಿದೆ.
ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕೆ.ಎಂ. ಲಕ್ಷ್ಮಿ ಅವರು ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
ಖೇಲೊ ಇಂಡಿಯಾ ಅಥ್ಲೆಟಿಕ್ಸ್: ಯುವತಾರೆಗಳ ‘ಹೊಸ’ ಭರವಸೆ
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಅವರು 35 ನಿಮಿಷ 49.23 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ತ್ರೀವ್ರ ಪೈಪೋಟಿ ನೀಡಿದ ಮಹರ್ಷಿ ದಯಾನಂದ ವಿವಿಯ ಭಾರತಿ ಮತ್ತು ಬಧೊ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಭಾರತಿ 36 ನಿಮಿಷ 20.25 ಸೆಕೆಂಡುಗಳಲ್ಲಿ ಗುರಿ ಸೇರಿದರೆ ಬಧೋ 36 ನಿಮಿಷ 44.40 ಸೆಕೆಂಡು ತೆಗೆದುಕೊಂಡರು.
ಜನನಾಯಕ್ ಚಂದ್ರಶೇಖರ್ ವಿವಿಯ ಆರಿಫ್ ಅಲಿ ಖಾನ್ ಅವರು ಆಥ್ಲೆಟಿಕ್ಸ್‌ನ ಮೊದಲ ಸ್ಪರ್ಧೆಯಾದ ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದರು. 30 ನಿಮಿಷ 26.40 ಸೆಕೆಂಡುಗಳಲ್ಲಿ ಅವರು ಗುರಿಮುಟ್ಟಿದರು.
ಆಧ್ಯಾತ್ಮಿಕ ಪ್ರಯಾಣ: ವಾರಣಾಸಿಗೆ ಭೇಟಿ ಕೊಟ್ಟು ಮೋದಿಯ ಹೊಗಳಿದ ಎನ್ಬಿಎ ಸ್ಟಾರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.