ಥಾಮಸ್–ಊಬರ್ ಕಪ್ ಟೂರ್ನಿಯಿಂದ ಹಿಂದೆ ಸರಿದ ಕೊರಿಯಾ, ಇಂಡೊನೇಷ್ಯಾ

ಬೆಂಗಳೂರು: ದಕ್ಷಿಣ ಕೊರಿಯಾ ಮತ್ತು ಇಂಡೊನೇಷ್ಯಾ ತಂಡಗಳು ಮುಂದಿನ ತಿಂಗಳು ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿವೆ.
ಕೋವಿಡ್–19ರ ಆತಂಕದಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಶನಿವಾರ ತಿಳಿಸಿದೆ. ಆಸ್ಟ್ರೇಲಿಯಾ, ಥೈವಾನ್ ಮತ್ತು ಥಾಯ್ಲೆಂಡ್ ಈ ಹಿಂದೆ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧಿರಿಸಿದ್ದವು.
ಪುರುಷರ ಥಾಮಸ್ ಕಪ್ ಟೂರ್ನಿಯ ಪ್ರಶಸ್ತಿಯನ್ನು ದಾಖೆಯ 13 ಬಾರಿ ಗೆದ್ದಿರುವ ಇಂಡೊನೇಷ್ಯಾ ಮಹಿಳೆಯರ ಊಬರ್ ಕಪ್ ಪ್ರಶಸ್ತಿಯನ್ನು ಮೂರು ಬಾರಿ ಮಡಿಲಿಗೆ ಹಾಕಿಕೊಂಡಿದೆ.
ಮೇಯಲ್ಲಿ ನಡೆಯಬೇಕಾಗಿದ್ದ ಥಾಮಸ್ ಮತ್ತು ಊಬರ್ ಕಪ್ ಟೂರ್ನಿಯನ್ನು ಮೊದಲು ಆಗಸ್ಟ್ ತಿಂಗಳಿಗೂ ನಂತರ ಅಕ್ಟೋಬರ್‌ಗೂ ಮುಂದೂಡಲಾಗಿತ್ತು. ಟೂರ್ನಿಯಿಂದ ಹಿಂದೆ ಸರಿದಿರುವ ತಂಡಗಳ ಬದಲಿಗೆ ಯಾವುದಾದರೂ ತಂಡಗಳಿಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬುದನ್ನು ಆಯೋಜಕರು ಇನ್ನೂ ಸ್ಪಷ್ಟಪಡಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.