ಕೌನಸ್, ಲಿಥುವೇನಿಯಾ: ಭಾರತದ ಮಾಳವಿಕಾ ಬಾನ್ಸೋದ್ ಅವರು ಆರ್ಎಸ್ಎಲ್ ಲಿಥುವೇನಿಯನ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಇಲ್ಲಿ ಭಾನುವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು 21–14, 21–11ರಿಂದ ಐರ್ಲೆಂಡ್ನ ರಾಚೆಲ್ ಡರಾಗ್ ಅವರನ್ನು ಮಣಿಸಿದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಭಾರತದ ಆಟಗಾರ್ತಿ ಕೇವಲ 29 ನಿಮಿಷಗಳಲ್ಲಿ ನಾಲ್ಕನೇ ಶ್ರೇಯಾಂಕದ ರಾಚೆಲ್ ಸವಾಲನ್ನು ಮೀರಿದರು.

19 ವರ್ಷದ ಮಾಳವಿಕ ಕಳೆದ ತಿಂಗಳು ನಡೆದ ಆಸ್ಟ್ರಿಯನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅವರು 21–13, 21–10ರಿಂದ ಫ್ರಾನ್ಸ್ನ ಅನ್ನಾ ತಾತ್ರನೊವಾ ಅವರನ್ನು ಸೋಲಿಸಿದ್ದರು.

ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರ್ತಿ ವಿಲ್ಟ್ ಪೌಲಾಸ್ಕೈಟ್ ಎದುರು ಗೆದ್ದಿದ್ದ ಮಾಳವಿಕಾ, ಬಳಿಕ ಇಸ್ರೇಲ್ನ ಹೇಲಿ ನೇಮನ್ ಅವರಿಗೆ ಸೋಲುಣಿಸಿದ್ದರು. ಕ್ವಾರ್ಟರ್ಫೈನಲ್ನಲ್ಲಿ ಆಸ್ಟ್ರಿಯದ ಕ್ಯಾತರಿನ್ ನ್ಯೂಡೊಲ್ಟ್ ಎದುರು ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.