ಬುಧವಾರ, ಆಗಸ್ಟ್ 10, 2022
24 °C
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌: ಕೆಂಟೊ ಮೊಮೊಟಾಗೆ ಹೀನಾಯ ಸೋಲು

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌: ವಿಕ್ಟರ್‌ ಅಕ್ಸೆಲ್ಸೆನ್‌ ಚಾಂಪಿಯನ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಅಮೋಘ ಆಟವಾಡಿದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್‌ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ, ಒಲಿಂಪಿಕ್ ಚಾಂಪಿಯನ್‌ ಅಕ್ಸೆಲ್ಸೆನ್‌ 21-4, 21-7ರಿಂದ ಜಪಾನ್‌ನ ಕೆಂಟೊ ಮೊಮೊಟಾ ಅವರಿಗೆ ಸೋಲುಣಿಸಿದರು.

ಅಪಘಾತದಿಂದ ಚೇತರಿಸಿಕೊಂಡ ಎರಡು ವರ್ಷಗಳ ಬಳಿಕ ಮೊದಲ ಬಾರಿ ಮಲೇಷ್ಯಾದಲ್ಲಿ ಆಡಿದ್ದ ಕೆಂಟೊ ಮೊಮೊಟಾ ಅವರಿಗೆ ಗೆಲುವು ಒಲಿಯಲಿಲ್ಲ. 34 ನಿಮಿಷಗಳ ಹಣಾಹಣಿಯಲ್ಲಿ ಜಪಾನ್‌ನ ಆಟಗಾರ ಹೀನಾಯ ಸೋಲು ಕಂಡರು. 

2020ರಲ್ಲಿ ಇಲ್ಲಿ ನಡೆದ ಕಾರು ಅಪಘಾತದಲ್ಲಿ ಮೊಮೊಟಾ ತೀವ್ರ ಗಾಯಗೊಂಡಿದ್ದರು. 

ಪ್ರಶಸ್ತಿ ಸುತ್ತಿನ ಸೆಣಸಾಟವು ಸಂಪೂರ್ಣ ಏಕಪಕ್ಷೀಯವಾಗಿತ್ತು. ಡೆನ್ಮಾರ್ಕ್‌ ಆಟಗಾರನ ಚುರುಕಿನ ಸ್ಮ್ಯಾಷ್‌ಗಳು ಮೊಮೊಟಾ ಅವರನ್ನು ಕಂಗೆಡಿಸಿದವು. ಹಲವು ಸ್ವಯಂಕೃತ ತಪ್ಪುಗಳೂ ಅವರ ಸೋಲಿಗೆ ಕಾರಣವಾದವು.

ಅಕ್ಸೆಲ್ಸೆನ್‌ ಅವರಿಗೆ ಈ ವರ್ಷದಲ್ಲಿ ಒಲಿದ ಐದನೇ ಪ್ರಶಸ್ತಿ ಇದು. ಈ ಮೊದಲು ಆಲ್‌ ಇಂಗ್ಲೆಂಡ್‌, ಯೂರೋಪಿಯನ್ ಚಾಂಪಿಯನ್‌ಷಿಪ್‌ ಮತ್ತು ಇಂಡೊನೇಷ್ಯಾದಲ್ಲಿ ನಡೆದ ಎರಡು ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

ಇಂತನನ್‌ಗೆ ಮಹಿಳಾ ಕಿರೀಟ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂತನನ್‌ ಪ್ರಶಸ್ತಿ ಗೆದ್ದರು. ಜಿದ್ದಾಜಿದ್ದಿನ ಫೈನಲ್‌ನಲ್ಲಿ ಅವರು 21-15, 13-21, 21-16ರಿಂದ ಚೀನಾದ ಚೆನ್‌ ಯು ಫೆಯ್ ಅವರನ್ನು ಸೋಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು