ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ ಅರ್ಹತಾ ಬಾಕ್ಸಿಂಗ್ ನಿರಾತಂಕ

ಕಾಪರ್ ಬಾಕ್ಸ್ ಅರೆನಾದಲ್ಲಿ ಮಾರ್ಚ್ 24ರ ವರೆಗೆ ನಡೆಯಲಿರುವ ಬೌಟ್‌ಗಳು
Last Updated 16 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ಲಂಡನ್: ಕೊರೊನಾ ವೈರಸ್ ಸೋಂಕಿನ ಆತಂಕವು ಜಗತ್ತಿನಾದ್ಯಂತ ಕ್ರೀಡಾ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದರೆ, ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್ ಟೂರ್ನಿ ನಿರಾತಂಕವಾಗಿ ಸಾಗಿದೆ.

ಯುರೋಪ್‌ನ ಬಾಕ್ಸರ್‌ಗಳ ಆಯ್ಕೆಗಾಗಿ ಕಾಪರ್ ಬಾಕ್ಸ್ ಅರೆನಾದಲ್ಲಿ ಮಾರ್ಚ್ 14ರ ಶನಿವಾರ ಆರಂಭಗೊಂಡಿರುವ ಟೂರ್ನಿ ಇದೇ 24ರ ವರೆಗೆ ನಡೆಯಲಿದ್ದು ಒಳಾಂಗಣ ಕ್ರೀಡಾಂಗಣಕ್ಕೆ ವೀಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿದೆ.

ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ12 ರಾಷ್ಟ್ರಗಳ 350 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಯುರೋಪ್‌ನ ಬಾಕ್ಸರ್‌ಗಳ ಒಲಿಂಪಿಕ್ಸ್ ಅರ್ಹತೆಗೆ ಇದು ಮೊದಲ ಅವಕಾಶ.

ಟೂರ್ನಿ ನಡೆಸುತ್ತಿರುವುದಕ್ಕೆ ಯುರೋಪ್‌ ಬಾಕ್ಸಿಂಗ್ ಫೆಡರೇಷನ್ ಬೇಸರ ವ್ಯಕ್ತಪಡಿಸಿದೆ. ‘ಇಂಥ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುವುದು ಅಚ್ಚರಿ ತಂದಿದೆ. ಇಲ್ಲಿ ಬಾಕ್ಸರ್‌ಗಳಿಗೆ ಕೊರೊನಾ ಸೋಂಕು ಬಾಧಿಸುವ ಸಾಧ್ಯತೆ ಅಧಿಕವಾಗಿದೆ. ವಿಮಾನ ಸೇವೆಗಳು ಇಲ್ಲದ ಕಾರಣ ಬಾಕ್ಸರ್‌ಗಳು ವಾಪಸ್ ತೆರಳುವುದೂ ಕಷ್ಟ’ ಎಂದು ಫೆಡರೇಷನ್ ಅಧ್ಯಕ್ಷ ಫ್ರಾಂಕೊ ಫಾಲ್ಸಿನೆಲಿ ಹೇಳಿದ್ದಾರೆ.

ಈ ನಡುವೆ ಸ್ಪರ್ಧೆಗಳನ್ನು ಮುಂದುವರಿಸಲು ನಿರ್ಧರಿಸಿರುವುದನ್ನು ಸಮರ್ಥಿಸಿಕೊಂಡಿರುವ ಸಂಘಟಕರು ‘ಎಲ್ಲ ತಂಡಗಳ ಸದಸ್ಯರಿಗೂ ಆಗಾಗ ಕೈ ತೊಳೆದುಕೊಳ್ಳುವಂತೆ ಸೂಚಿಸಲಾಗಿದೆ. ಯಾರಿಗಾದರೂ ನೆಗಡಿ, ಜ್ವರ ಕಾಣಿಸಿಕೊಂಡರೆ ಕೊಠಡಿಯಿಂದ ಹೊರಗೆ ಬಾರದಂತೆಯೂ ಯಾರೊಂದಿಗೂ ಬೆರೆಯದಂತೆಯೂ ತಿಳಿಸಲಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT