ಶನಿವಾರ, ಜೂಲೈ 4, 2020
24 °C

ಒಲಿಂಪಿಕ್ ಮುಂದೂಡಿಕೆ: ಫೆಡರೇಷನ್‌ಗಳಿಗೆ ನಷ್ಟ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲೂಸನ್‌: ಟೋಕಿಯೊ ಒಲಿಂಪಿಕ್‌ ಕೂಟವನ್ನು ಒಂದು ವರ್ಷ ಮುಂದೂಡಿರುವುದರಿಂದ  ಹಲವು ಅಂತರರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಅರ್ಥಿಕವಾಗಿ ಅಪಾರ ನಷ್ಟವಾಗುತ್ತಿದೆ.

ಬಹಳಷ್ಟು ಕ್ರೀಡಾ ಸಂಸ್ಥೆಗಳು ಒಲಿಂಪಿಕ್ಸ್‌ನಿಂದ ಬರುವ ಆದಾಯದ ಪಾಲು ಹಣದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದೀಗ ಅದಕ್ಕಾಗಿ ಮುಂದಿನ ವರ್ಷ ಒಲಿಂಪಿಕ್ಸ್‌ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ.

‘ಸದ್ಯದ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಎಲ್ಲ ಲೆಕ್ಕಾಚಾರಗಳನ್ನೂ ಮಾಡಲಾಗುತ್ತಿದೆ. ಆದರೂ ಕೆಲವು ವಿಭಾಗಗಳು ನಷ್ಟ ಅನುಭವಿಸುವ ಆತಂಕವಿದೆ’ ಎಂದು ಅಂತರಾಷ್ಟ್ರೀಯ ಕ್ರೀಡಾ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ಒಲಿಂಪಿಕ್ಸ್‌ನಲ್ಲಿ ಒಟ್ಟು 28 ಕ್ರೀಡಾ ಫೆಡರೇಷನ್‌ಗಳು ಭಾಗಿಯಾಗಬೇಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು