ಶುಕ್ರವಾರ, ಮಾರ್ಚ್ 31, 2023
25 °C

ಸೈಕ್ಲಿಂಗ್‌ನಲ್ಲಿ ಕೆನ್ನಿ ‘ಕಿಂಗ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಪುರುಷರ ಸೈಕ್ಲಿಂಗ್‌ನ ಕೀರಿನ್‌ ವಿಭಾಗದಲ್ಲಿ ಬ್ರಿಟನ್‌ನ ಜೇಸನ್‌ ಕೆನ್ನಿ ಮೋಡಿ ಮಾಡಿದರು.

ಕೊನೆಯ ನಾಲ್ಕು ಲ್ಯಾಪ್‌ಗಳಲ್ಲಿ ವೇಗ ಹೆಚ್ಚಿಸಿಕೊಂಡು ಗುರಿಯತ್ತ ಮುನ್ನುಗ್ಗಿದ ಅವರು ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ಒಲಿಂಪಿಕ್ಸ್‌ ಸೈಕ್ಲಿಂಗ್‌ನಲ್ಲಿ ಏಳು ಚಿನ್ನದ ಪದಕ ಜಯಿಸಿದ ಬ್ರಿಟನ್‌ನ ಮೊದಲ ಕ್ರೀಡಾಪಟು ಎಂಬ ಹಿರಿಮೆಗೂ ಭಾಜನರಾದರು.

ಮಲೇಷ್ಯಾದ ಮಹಮ್ಮದ್‌ ಅಜಿಜುಲ್‌ ಹಸ್ನಿ ಮತ್ತು ನೆದರ್ಲೆಂಡ್ಸ್‌ನ ಹ್ಯಾರಿ ಲ್ಯಾವರೆಸೆನ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ವಿಜಯ ವೇದಿಕೆಯಲ್ಲಿ ಮಹಮ್ಮದ್‌ ಮತ್ತು ಹ್ಯಾರಿ, ಚಿನ್ನದ ಸಾಧಕ ಜೇಸನ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಆ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು