ಭಾನುವಾರ, ಡಿಸೆಂಬರ್ 15, 2019
21 °C

ಪ್ರೊ ಕಬಡ್ಡಿ: ಯು ಮುಂಬಾಗೆ ಮತ್ತೊಂದು ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಯು ಮುಂಬಾ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸತತ  ಎರಡನೇ ದಿನವೂ ಜಯದ ರುಚಿ ಸವಿಯಿತು.

ಇಲ್ಲಿಯ ತ್ಯಾಗರಾಜ್ ಸ್ಪೋರ್ಟ್ಸ್‌  ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬಾ ತಂಡವು 36–26 ರಿಂದ ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ವಿರುದ್ಧ ಗೆದ್ದಿತು.  ಶನಿವಾರ ದಬಂಗ್ ಡೆಲ್ಲಿ ವಿರುದ್ಧ  ಮಿಂಚಿದ್ದ ಸಿದ್ಧಾರ್ಥ್ ದೇಸಾಯಿ ಮತ್ತೆ  ಉತ್ತಮ ಆಟವಾಡಿದರು. ಅವರು ಒಟ್ಟು ಆರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ರೋಹಿತ್ ಬಲಿಯಾನ್  ಆಲ್‌ರೌಂಡ್ ಆಟವಾಡಿ ಆರು ಪಾಯಿಂಟ್ ಗಳಿಸಿದರು. ಧರ್ಮರಾಜ್ ಚೇರಲಥಾನ್ ಟ್ಯಾಕಲ್‌ನಲ್ಲಿ
ಐದು ಮತ್ತು ಬೋನಸ್‌ನಲ್ಲಿ ಒಂದು ಅಂಕ ಗಳಿಸಿದರು. ಗುಜರಾತ್ ತಂಡದ ಸಚಿನ್  ಒಟ್ಟು ಎಂಟು ಪಾಯಿಂಟ್‌ಗಳನ್ನು ಸಂಗ್ರಹಿಸಿದರು.  ಆದರೆ ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಇದರಿಂದಾಗಿ ಮುಂಬಾ ತಂಡವನ್ನು ಕಟ್ಟಿಹಾಕುವಲ್ಲಿ ಗುಜರಾತ್ ವಿಫಲವಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು