ಮೀರಾಬಾಯಿಗೆ ವಿರಾಟ್ ವಿಶೇಷ ಸಂದೇಶ; ಸ್ಪರ್ಧಿಗಳಿಗೆ ದ್ರಾವಿಡ್ ಜಯಕಾರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಅಭಿನಂದನೆ ಸಲ್ಲಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಂದೇಶ ರವಾನಿಸಿದ್ದಾರೆ.
ಈ ವೇಳೆ ಟೋಕಿಯೊ ಮಹಾಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತೀಯ ಸ್ಪರ್ಧಿಗಳನ್ನು ಮಾಜಿ ನಾಯಕ ರಾಹುಲ್ ದ್ರಾವಿಡ್ ಹುರಿದುಂಬಿಸಿದ್ದಾರೆ.
ಇದನ್ನೂ ಓದಿ: Tokyo Olympic - Mirabai Chanu| ಮೀರಾಬಾಯಿ ಕೊರಳಿಗೆ ಬೆಳ್ಳಿ ಹಾರ
ಈ ಎರಡೂ ವಿಡಿಯೊಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
'ಇಡೀ ದೇಶದ ನಿರೀಕ್ಷೆಗಳ ಭಾರವನ್ನು ಹೊತ್ತುಕೊಂಡು ಅದನ್ನು ಹೇಗೆ ಗೆಲುವಾಗಿ ಪರಿವರ್ತಿಸಬೇಕೆಂಬುದು ಮೀರಾಬಾಯಿ ಚಾನು ಅವರಿಗೆ ತಿಳಿದಿದೆ' ಎಂದು ವಿರಾಟ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
#TeamIndia captain @imVkohli has a special message for weightlifter @mirabai_chanu, who won India's first medal at @Tokyo2020. 🇮🇳 👏 👏@IndiaSports | @Media_SAI | @WeAreTeamIndia pic.twitter.com/suRbQmB4bd
— BCCI (@BCCI) July 26, 2021
ರಾಹುಲ್ ದ್ರಾವಿಡ್ ತಮ್ಮ ಸಂದೇಶದಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಸ್ಪರ್ಧಿಗಳನ್ನು ಹುರಿದುಂಬಿಸೋಣ ಎಂದು ಮನವಿ ಮಾಡಿದ್ದಾರೆ. 'ಚಿಯರ್ ಫಾರ್ ಇಂಡಿಯಾ' ಅಭಿಯಾನದ ಭಾಗವಾಗಿ ರಾಹುಲ್ ಭಾರತೀಯ ಸ್ಪರ್ಧಿಗಳನ್ನು ಹುರಿದುಂಬಿಸಿದ್ದಾರೆ.
ದ್ರಾವಿಡ್ ಪ್ರಸ್ತುತ ಲಂಕಾ ಪ್ರವಾಸದಲ್ಲಿದ್ದು, ಭಾರತದ ಯುವ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಏಕದಿನ ಸರಣಿಯಲ್ಲಿ ಗೆಲುವು ದಾಖಲಿಸಿರುವ ಶಿಖರ್ ಧವನ್ ಪಡೆಯು, ಟ್ವೆಂಟಿ-20 ಸರಣಿಯಲ್ಲೂ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ.
Rahul Dravid - batting legend & #TeamIndia's Head Coach for the Sri Lanka series - is cheering for our athletes at @Tokyo2020. 👍 👍
Let's join him & #Cheer4India 🇮🇳 👏 👏@IndiaSports | @Media_SAI | @WeAreTeamIndia pic.twitter.com/eJzXjM3IJN
— BCCI (@BCCI) July 26, 2021
ಅತ್ತ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ಆಗಸ್ಟ್ ತಿಂಗಳಿನಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.