ನವದೆಹಲಿ: ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಾಪ್) ಯೋಜನೆಯಡಿ ತರಬೇತಿ ಪಡೆಯುತ್ತಿರುವ ಆರ್ಚರ್‌ಗಳಿಗೆ ಭಾರತ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ₹33.18 ಲಕ್ಷ ನೀಡಲಿದೆ.
ಪಾರ್ಥ್ ಸಾಳುಂಕೆ, ಆದಿತ್ಯ ಚೌಧರಿ, ದೀಪ್ತಿ ಕುಮಾರಿ, ಸಿಮ್ರನ್‌ಜೀತ್ ಕೌರ್, ನೀರಜ್ ಚೌಹಾಣ್, ರಿಧಿ, ಮಧು ವೇದ್ವಾನ್, ಸುಧಾಂಶು ಬಿಷ್ಠ್, ದಿವ್ಯಾಂಶ್ ಕುಮಾರ್ ಮತ್ತು ತಿಶಾ ಪೂನಿಯಾ ಅವರು ಆರ್ಥಿಕ ನೆರವು ಪಡೆದುಕೊಳ್ಳಲಿದ್ದಾರೆ. ಪ್ರತಿ ಆರ್ಚರ್‌ಗೆ ₹ 3.5 ಲಕ್ಷದಷ್ಟು ಮೊತ್ತ ಸಿಗಲಿದೆ.
ಮುಂಬರುವ ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗಾಗಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಬೋ ಸೆಟ್ ಸೇರಿದಂತೆ ಹೆಚ್ಚುವರಿ ಉಪಕರಣಗಳನ್ನು ಖರೀದಿಸಲು ನೆರವಾಗುವುದು ಇದರ ಉದ್ದೇಶ.
ನಾಲ್ಕು ಹಂತಗಳಲ್ಲಿ ನಡೆಯಲಿರುವ ವಿಶ್ವಕ್ ಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳನ್ನು ಭಾರತ ಆರ್ಚರಿ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.