ಶನಿವಾರ, ಮಾರ್ಚ್ 28, 2020
19 °C

ಆಲ್‌ ಇಂಗ್ಲೆಂಡ್ ವಿರುದ್ಧ ಸೈನಾ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಆಯೋಜನೆಯ ಹಿಂದೆ ದುಡ್ಡಿನ ಕಾಳಜಿ ಇತ್ತು. ಆಟಗಾರರ ಹಿತಾಸಕ್ತಿಯನ್ನು ಕಡೆಗಣಿಸಲಾಗಿತ್ತು ಎಂದು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಭೀತಿ ಇದ್ದರೂ ಟೂರ್ನಿಯನ್ನು ನಡೆಸಿದ್ದರ ಬಗ್ಗೆ ಅವರು ಆಕ್ಷೇಪ ಎತ್ತಿದ್ದಾರೆ.

‘ಟೂರ್ನಿಯನ್ನು ಆಯೋಜಿಸಲು ಯಾವ ಅನಿವಾರ್ಯತೆಯೂ ಇರಲಿಲ್ಲ. ಹಣ ವ್ಯರ್ಥವಾಗದಂತೆ ನೋಡಿಕೊಳ್ಳಲು ಮತ್ತು ಗಳಿಸಲು ಮಾತ್ರ  ಟೂರ್ನಿ ನಡೆಸಲಾಯಿತು. ಆದರೆ, ಆಟಗಾರರ ಜೀವದ ಬಗ್ಗೆ ಯೋಚಿಸಿದ್ದರೆ ಟೂರ್ನಿಯನ್ನು ರದ್ದು ಮಾಡುತ್ತಿದ್ದರು’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.

 ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ ಆಟಗಾರ ಮತ್ತು ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್, ‘ಭಾಗವಹಿಸಿದ್ದ ಬಹಳಷ್ಟು ಆಟಗಾರರು ಒತ್ತಡದಲ್ಲಿದ್ದರು’ ಎಂದಿದ್ದಾರೆ.

ವಿದೇಶಿ ಕೋಚ್‌ಗಳಿಗೆ ಉತ್ತರದಾಯಿತ್ವ ಇರಲಿ: ವಿಮಲ್

ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ತರಬೇತಿ ನೀಡಲು ಬರುವ ವಿದೇಶಿ ಕೋಚ್‌ಗಳಿಗೆ ಉತ್ತರದಾಯಿತ್ವ ಮತ್ತು ಬದ್ಧತೆ ಇರಬೇಕು ಎಂದು ಹಿರಿಯ ಕೋಚ್ ವಿಮಲ್‌ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಈಚೆಗೆ ಡಬಲ್ಸ್‌ ಕೋಚ್, ಇಂಡೊನೇಷ್ಯಾದ ಫ್ಲೆಂಡಿ ಲಿಂಪೆಲ್ ಅವರು ತಮ್ಮ ಒಪ್ಪಂದ ಮುಗಿಯುವ ಮುನ್ನವೇ ಕೆಲಸ ಬಿಟ್ಟು ಹೋಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ವಿಮಲ್, ‘ಇದು ಒಲಿಂಪಿಕ್ ಕೂಟ ನಡೆಯುವ ವರ್ಷ. ಆಟಗಾರರ ಜೀವಮಾನದ ಶ್ರಮ ಈ ದಿನಕ್ಕಾಗಿಯೇ ವಿನಿಯೋಗವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಂಡವನ್ನು ಬಿಟ್ಟು ನಿರ್ಗಮಿಸುವುದು ವೃತ್ತಿಪರತೆ ಅಲ್ಲ. ಫ್ಲೆಂಡಿ ನಡವಳಿಕೆಯಿಂದ ಬೇಸರವಾಗಿದೆ’ ಎಂದಿದ್ದಾರೆ.

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು