ಮಂಗಳವಾರ, ಮಾರ್ಚ್ 2, 2021
19 °C
ಎಐಟಿಎ ಟಿಎಸ್‌7 ಟೆನಿಸ್ ಟೂರ್ನಿ

ಸೆಹೆಜ್‌ ಸಿಂಗ್ ಹಾಗೂ ಸುಶ್ಮಿತಾ ರವಿಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ಸೆಹೆಜ್‌ ಸಿಂಗ್ ಹಾಗೂ ಸುಶ್ಮಿತಾ ರವಿ ಎಐಟಿಎ ಟಿಎಸ್‌7 14 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಶುಕ್ರವಾರ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಫಾರ್ಚುನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿರುವ ಟೂರ್ನಿಯ ಫೈನಲ್ ಪ‍ಂದ್ಯದಲ್ಲಿ ಸೆಹೆಜ್ ಸಿಂಗ್‌ 6–2, 6–3ರಿಂದ ಗಂಧರ್ವ ಕೊತಪಲ್ಲಿ ವಿರುದ್ಧ ಗೆಲುವು ಸಾಧಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸುಶ್ಮಿತಾ 6–2, 7–5ರಿಂದ ಅನ್ವಿ ಪುನಗಂಟಿ ಅವರನ್ನು ಸೋಲಿಸಿದರು.

ಪ್ರಶಸ್ತಿಗಾಗಿ ರಿಷಿ–ಮಧ್ವಿನ್ ಸೆಣಸು: ಇಲ್ಲಿಯ ದ್ರಾವಿಡ್–ಪಡುಕೋಣೆ ಸ್ಪೋರ್ಟ್ಸ್ ಎಕ್ಸ್‌ಲೆನ್ಸ್‌ನ ಪಿಬಿಐ–ಸಿಎಸ್‌ಇ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ ಪುರುಷರ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಕರ್ನಾಟಕದ ರಿಷಿ ರೆಡ್ಡಿ ಹಾಗೂ ಗುಜರಾತ್‌ನ ಮಧ್ವಿನ್ ಕಾಮತ್ ಮುಖಾಮುಖಿಯಾಗಲಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ರಿಷಿ 6–3, 6–2ರಿಂದ ತೆಲಂಗಾಣದ ತರುಣ್‌ ಅನಿರುದ್ಧ ಎದುರು ಸುಲಭವಾಗಿ ಗೆದ್ದರು. ಮತ್ತೊಂದು ಪಂದ್ಯದಲ್ಲಿ ಮಧ್ವಿನ್‌ ಅವರಿಗೆ 6–1, 6–2ರಿಂದ ಕರ್ನಾಟಕದ ನಿಕ್ಷೇಪ್ ಬಲ್ಲೆಕೆರೆ ಎದುರು ಜಯ ಒಲಿಯಿತು.

ನಿಶಾಂತ್‌–ಯಶ್‌ ಚಾಂಪಿಯನ್‌: ಪುರುಷರ ಡಬಲ್ಸ್‌ನಲ್ಲಿ ಕರ್ನಾಟಕದ ನಿಶಾಂತ್ ರೆಬೆಲ್ಲೊ–ಮಧ್ಯಪ್ರದೇಶದ ಯಶ್ ಯಾದವ್ ಜೋಡಿಯು 6–3, 6–2ರಿಂದ ಕರ್ನಾಟಕ–ತಮಿಳುನಾಡು ಜೋಡಿ ರಿಷಿ ರೆಡ್ಡಿ–ಧೀರಜ್ ಶ್ರೀನಿವಾಸನ್ ಎದುರು ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.