ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೂಕರ್‌: ಪ್ರೀ ಕ್ವಾರ್ಟರ್‌ಗೆ ಯೋಗೇಶ್‌

Last Updated 18 ಮೇ 2019, 19:45 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಅಮೋಘ ಆಟ ಆಡಿದ ಕರ್ನಾಟಕದ ಯೋಗೇಶ್‌ ಕುಮಾರ್‌ ಅವರು ಎನ್‌.ಮಣಿಮಾರನ್‌ ಮತ್ತು ಕಿಶನ್‌ ಕೊಠಾರಿ ಸ್ಮಾರಕ ಎಸ್‌ವಿಎಸ್‌ ಕ್ಲಬ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 32ರ ಘಟ್ಟದ ಪೈಪೋಟಿಯಲ್ಲಿ ಯೋಗೇಶ್‌ 68–09, 84–07, 62–27, 66–10 ನೇರ ಫ್ರೇಮ್‌ಗಳಿಂದ ಉದಯ್‌ ಕುಮಾರ್‌ ಅವರನ್ನು ಸೋಲಿಸಿದರು.

ಮೊದಲ ಎರಡು ಫ್ರೇಮ್‌ಗಳಲ್ಲಿ ಎದುರಾಳಿಗೆ ಕೇವಲ 16 ಪಾಯಿಂಟ್ಸ್‌ ಬಿಟ್ಟುಕೊಟ್ಟ ಯೋಗೇಶ್‌, ನಂತರದ ಎರಡು ಫ್ರೇಮ್‌ಗಳಲ್ಲೂ ಮೋಡಿ ಮಾಡಿದರು.

ಇನ್ನೊಂದು ಪಂದ್ಯದಲ್ಲಿ ಕೊಯಮತ್ತೂರಿನ ವಿಜಯ್‌ ನಿಚಾನಿ 77–32, 88–16, 49–57, 28–65, 122–1, 53–62, 58–8ರಲ್ಲಿ ರೈಲ್ವೇಸ್‌ನ ದಿಲೀಪ್‌ ಕುಮಾರ್ ಎದುರು ಗೆದ್ದರು.

ದಕ್ಷ ರೆಡ್ಡಿ 43–71, 81–0, 88–44, 61–42, 85–5ರಲ್ಲಿ ಪೀಟರ್‌ ‍ಪಾಲ್‌ ಎದುರೂ, ಮುಷ್ತಾಕ್‌ 15–63, 29–50, 36–58, 63–28, 54–20, 66–26, 60–49ರಲ್ಲಿ ವಿನಯ್‌ ಕೊಠಾರಿ ವಿರುದ್ಧವೂ ವಿಜಯಿಯಾದರು.

64ರ ಘಟ್ಟದ ಪೈಪೋಟಿಯಲ್ಲಿ ಕರ್ನಾಟಕದ ಬಿ.ಸಿ.ಕಾರ್ತಿಕ್‌ ಗೆಲುವಿನ ಸಿಹಿ ಸವಿದರು.

ಕಾರ್ತಿಕ್‌ 77–3, 65–47, 45–51, 62–29ರಲ್ಲಿ ಶರತ್‌ ಅವರನ್ನು ಸೋಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT