ಶುಕ್ರವಾರ, ಜೂಲೈ 10, 2020
22 °C

ಫೋಬ್ಸ್‌ ಪಟ್ಟಿಯಲ್ಲಿ ಪಿ.ವಿ.ಸಿಂಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇದೇ ಮೊದಲ ಬಾರಿಗೆ ಫೋಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. 

ಮಂಗಳವಾರ ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ, ಹೆಚ್ಚು ಆದಾಯ ಪಡೆಯುತ್ತಿರುವ ಆಟಗಾರ್ತಿಯರ ಪಟ್ಟಿಯಲ್ಲಿ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಸತತ ಮೂರನೇ ಬಾರಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

ಪಟ್ಟಿಯಲ್ಲಿ ಬಹುತೇಕ ಟೆನಿಸ್‌ ಕ್ರೀಡಾಪಟುಗಳೇ ಇದ್ದು, ಅಗ್ರ ಹತ್ತು ಆಟಗಾರ್ತಿಯರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಏಳನೇ ಸ್ಥಾನ ಗಳಿಸಿರುವುದು ವಿಶೇಷ. ಇನ್ನು ರೇಸ್ ಕಾರ್ ಡ್ರೈವರ್ ಡೆನಿಕಾ ಪ್ಯಾಟ್ರಿಕ್‌ 9ನೇ ಸ್ಥಾನದಲ್ಲಿದ್ದಾರೆ.

23 ವರ್ಷದ ಸಿಂಧು ಅವರು ಸುಮಾರು ₹59 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಬ್ಡಿಡ್ಜ್‌ ಸ್ಟೋನ್, ಗ್ಯಾಟೊರೇಡ್‌, ನೊಕಿಯಾ, ಪ್ಯಾನಾಸೋನಿಕ್‌ ರೆಕಿಟ್‌ ಬೆನ್ಸಿಸ್ಕರ್‌ನಂತಹ ಆರಕ್ಕೂ ಹೆಚ್ಚು ಸಂಸ್ಥೆಗಳ ಪ್ರಚಾರ ರಾಯಭಾರಿಯಾಗಿ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಫೋಬ್ಸ್‌ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು