ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಡೊ ಚಾಂಪಿಯನ್‌ಷಿಪ್‌: ಮಿಂಚಿದ ಬೆಳಗಾವಿ ಬಾಲಕಿಯರು

Last Updated 8 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಕೋಲಾರ: ಬೆಳಗಾವಿಯ ಬಾಲಕಿಯರು ಮಂಗಳವಾರ ಇಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 14 ಮತ್ತು 17 ರ ವಯೋಮಿತಿಯ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಮಿಂಚು ಹರಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನ 4 ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದರು.

14 ವರ್ಷದೊಳಗಿನವರ ಬಾಲಕಿಯರ 32 ಕೆ.ಜಿ ತೂಕ ವಿಭಾಗದಲ್ಲಿ ಬೆಳಗಾವಿಯ ಭೂಮಿಕಾ ಮೊದಲ ಸ್ಥಾನ ಪಡೆದರು. ಬೆಂಗಳೂರು ಉತ್ತರ ವಿಭಾಗದ ಎನ್‌.ರೇಷ್ಮಾ ಅವರನ್ನು ಮಣಿಸಿದರು. ದಾವಣಗೆರೆಯ ಟಿ.ನಂದಿನಿ, ದಾವಣಗೆರೆಯ ಶ್ರಾವಂತಿ ತೃತೀಯ ಸ್ಥಾನ ಪಡೆದರು. 23 ಕೆ.ಜಿ.ವಿಭಾಗದೊಳಗಿನ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವೈ.ಎಂ.ಪ್ರಣವಿ ಅಗ್ರಸ್ಥಾನ ಪಡೆದರು. ಅಂತಿಮ ಹಣಾಹಣಿಯಲ್ಲಿ ಮಂಡ್ಯದಬಿ.ಜಿ.ತ್ರಿಶಾವಿರುದ್ಧ ಗೆದ್ದರು. ಶಿವಮೊಗ್ಗದ ಬಿ.ದಿವ್ಯಾ, ದಾವಣಗೆರೆಯ ರಾಜೇಶ್ವರಿ ತೃತೀಯ ಸ್ಥಾನ ಪಡೆದರು.

15 ಜಿಲ್ಲೆಗಳಿಂದ ಸುಮಾರು 600 ಮಕ್ಕಳು ಪಾಲ್ಗೊಂಡಿದ್ದಾರೆ. ಎರಡು ದಿನ ಈ ಚಾಂಪಿಯನ್‌ಷಿಪ್‌ ನಡೆಯಲಿದೆ.

ಫಲಿತಾಂಶ: 14 ವರ್ಷ (23 ಕೆ.ಜಿ ಒಳಗೆ): ವೈ.ಎಂ.ಪ್ರಣವಿ (ಚಿಕ್ಕಬಳ್ಳಾಪುರ)–1, ಬಿ.ಜಿ.ತ್ರಿಶಾ(ಮಂಡ್ಯ)–2, ಬಿ.ದಿವ್ಯಾ (ಶಿವಮೊಗ್ಗ), ರಾಜೇಶ್ವರಿ–(ದಾವಣಗೆರೆ)–3.‌

27 ಕೆ.ಜಿ ಒಳಗೆ: ಶರೀನ್‌ ಬ್ಲೆಸ್ಸಿ (ಬೆಂಗಳೂರು ಉತ್ತರ)–1, ರಕ್ಷಿತಾ ನಾಯಕ್‌ (ಬೆಳಗಾವಿ)–2, ಹಶ್ಮಿಯಾ ಸಿಂದಗಿ (ವಿಜಯಪುರ), ಜಾಹ್ನವಿ (ಕೋಲಾರ)–3.

32 ಕೆ.ಜಿ ಒಳಗೆ: ಭೂಮಿಕಾ (ಬೆಳಗಾವಿ)–1, ಎನ್‌.ರೇಷ್ಮಾ (ಬೆಂಗಳೂರು ಉತ್ತರ)–2, ಟಿ.ನಂದಿನಿ (ದಾವಣಗೆರೆ), ಶ್ರಾವಂತಿ (ವಿಜಯಪುರ)–3.

36 ಕೆ.ಜಿ ಒಳಗೆ: ಕೆ.ವಿದ್ಯಾಶ್ರೀ (ಮಂಡ್ಯ)–1, ಅನಾಮಿಕಾ (ಕಲಬುರಗಿ)–2, ಸೇವಂತಿ (ಬೆಂಗಳೂರು ಉತ್ತರ), ಅಶ್ವಿನಿ (ದಾವಣಗೆರೆ)–4.

40 ಕೆ.ಜಿ ಒಳಗೆ: ಶ್ವೇತಾ (ಬೆಳಗಾವಿ)–1, ಕೆ.ನಂದಿನಿ (ಶಿವಮೊಗ್ಗ)–2, ಜಿ.ವೈಷ್ಣವಿ (ಚಿಕ್ಕಮಗಳೂರು), ಬಿ.ಯಶಸ್ವಿನಿ (ಬೆಂಗಳೂರು ಉತ್ತರ)–3.

44 ಕೆ.ಜಿ ಒಳಗೆ: ದಿಯಾ ಪಾಟೀಲ (ಬೆಳಗಾವಿ)–1, ಎಚ್‌.ಎಸ್‌.ಸ್ಮಿತಾ (ಚಿಕ್ಕಮಗಳೂರು)–2, ಹಾಲಮ್ಮ (ದಾವಣಗೆರೆ), ಪಿ.ವೈಷ್ಣವಿ (ಶಿವಮೊಗ್ಗ)–3.

44 ಕೆ.ಜಿ ಮೇಲೆ: ಸಂಜನಾ ಎಸ್‌.ಶೇಟ್‌ (ಬೆಳಗಾವಿ)–1, ಚಾರ್ವಿ ಯಾದವ್‌ (ಚಿಕ್ಕಮಗಳೂರು)–2, ವಿ.ಸೋನೇಶ್ವರಿ (ಬೆಂಗಳೂರು ಉತ್ತರ), ಅಕ್ಷಿತಾ (ಕೋಲಾರ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT