ಶುಕ್ರವಾರ, ಜನವರಿ 28, 2022
25 °C

ಬ್ಲಿಟ್ಜ್‌ ಚೆಸ್ ಟೂರ್ನಿ: ಸುಜಯ್‌ಗೆ ಚಾಂಪಿಯನ್‌ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೂರ್ಣ ಅಂಕಗಳನ್ನು ಗಳಿಸಿದ ಬೆಂಗಳೂರಿನ ಸುಜಯ್ ಬಿ.ಎಂ ಅವರು ಚಾಂಪಿಯನ್ಸ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಬ್ಲಿಟ್ಜ್‌ ಚೆಸ್ ಟೂರ್ನಿಯ ಮುಕ್ತ ವಿಭಾಗದ ಚಾಂಪಿಯನ್ ಆದರು.

ಐದರಲ್ಲಿ ಐದು ಪಾಯಿಂಟ್‌ಗಳನ್ನು ಅವರು ಗಳಿಸಿದರು. ನಾಲ್ಕು ಪಾಯಿಂಟ್ ಕಲೆ ಹಾಕಿದ ಸಂತೋಷ್ ಕುಮಾರ್ ಬಿ.ಎಸ್‌ ಎರಡನೇ ಸ್ಥಾನ ಗಳಿಸಿದರೆ ಅನುದೀಪ್ ಕೆ.ಎಸ್‌ ಕೂಡ ನಾಲ್ಕು ಪಾಯಿಂಟ್ ಗಳಿಸಿ ಮೂರನೇ ಸ್ಥಾನ ಗಳಿಸಿದರು. 

ಫಲಿತಾಂಶಗಳು: ಮುಕ್ತ ವಿಭಾಗ: ಸುಜಯ್‌ ಬಿ.ಎಂ–1, ಸಂತೋಷ್ ಕುಮಾರ್–2, ಅನುದೀಪ್–3; 16 ವರ್ಷದೊಳಗಿನವರು: ಚಿನ್ಮಯಿ–1, ಶಾನ್ ಪಿಂಟೊ–2, ಸಮರ್ಥ್‌ ದೇಸಾಯಿ–3; 10 ವರ್ಷದೊಳಗಿನವರ ವಿಭಾಗ: ಫಯಾಜ್ ಅಹಮ್ಮದ್–1, ಹಾರುಷ್‌–2, ಸುಜನ್ ಶೇಷಾದ್ರಿ–3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು