ಗುರುವಾರ , ಸೆಪ್ಟೆಂಬರ್ 16, 2021
24 °C

ಜರ್ಮನಿಯ ಹಾನ್ ಗರಡಿಯಲ್ಲಿ ಪಳಗಿದ ಪ್ರತಿಭೆ ನೀರಜ್‌ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೀರಜ್‌ ಚೋಪ್ರಾ ಸಾಧನೆಯ ಶ್ರೇಯ ಅವರ ಕೋಚ್‌ ಯುವೆ ಹಾನ್‌ ಅವರಿಗೂ ಸಲ್ಲಬೇಕು.

ಜರ್ಮನಿಯ ಹಾನ್‌ 1984ರ ಜುಲೈ 20ರಂದು ನಡೆದಿದ್ದ ಕೂಟವೊಂದರಲ್ಲಿ 104.80 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆದಿದ್ದರು. ಈವರೆಗೂ ಈ ದಾಖಲೆ ಮುರಿಯಲು ಯಾರಿಗೂ ಆಗಿಲ್ಲ.

1985ರಲ್ಲಿ ಕ್ಯಾನ್‌ಬೆರಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 96.96 ಮೀಟರ್ಸ್‌ ಸಾಮರ್ಥ್ಯ ತೋರಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. 1982ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು.

ಇದನ್ನೂ ಓದಿ: 

ಹಾನ್‌ ಅವರು 2017ರ ನವೆಂಬರ್‌ನಲ್ಲಿ ಭಾರತ ಜಾವೆಲಿನ್‌ ಥ್ರೋ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರ ಮಾಸಿಕ ವೇತನ ₹5.9 ಲಕ್ಷ ಎಂದು ಹೇಳಲಾಗಿದೆ. ಒಲಿಂಪಿಕ್ಸ್‌ವರೆಗೂ ಮಾತ್ರ ಅವರೊಂದಿಗೆ ಎಎಫ್‌ಐ ಒಪ್ಪಂದ ಮಾಡಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು