ಮಂಗಳವಾರ, ಸೆಪ್ಟೆಂಬರ್ 28, 2021
25 °C

ಮಿತಿ ಮೀರಿದ ಸಂಭ್ರಮದಲ್ಲಿ ಕಾಲಿಗೆ ಗಾಯ: ಬಾಕ್ಸರ್ ಒಲಿಂಪಿಕ್ಸ್ ಕನಸು ಭಗ್ನ

ಎಪಿ Updated:

ಅಕ್ಷರ ಗಾತ್ರ : | |

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನ ಅಭಿಲಾಷೆಯಾಗಿರುತ್ತದೆ. ಹಾಗಿರಬೇಕೆಂದರೆ ಸೆಮಿಫೈನಲ್ ಪ್ರವೇಶಿಸಿದ ಬಾಕ್ಸರ್ ಅತಿಯಾದ ಸಂಭ್ರಮಾಚರಣೆಯ ವೇಳೆ ಕಾಲಿಗೆ ಗಾಯಗೊಂಡ ಪರಿಣಾಮ ಒಲಿಂಪಿಕ್ಸ್ ಕನಸು ಭಗ್ನಗೊಂಡಿರುವ ಘಟನೆ ಟೋಕಿಯೊದಿಂದ ವರದಿಯಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಬಾಕ್ಸಿಂಗ್ ವಿಭಾಗದಲ್ಲಿ ರಿಂಗ್‌ಗಿಳಿದಿದ್ದ ಐರ್ಲೆಂಡ್‌ನ ಏಡನ್ ವಾಲ್ಷ್, ಕ್ವಾರ್ಟರ್‌ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಾರಿಷನ್‌ನ ಮೆರ್ವೆನ್ ಕ್ಲೇರ್ ವಿರುದ್ಧ 4-1ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಇದನ್ನೂ ಓದಿ: 

ಆದರೆ ವಿಜಯದ ಅಮಿತೋತ್ಸಾಹದಲ್ಲಿ ಮೈಮರೆತ ಬಾಕ್ಸರ್ ಕುಣಿದು ಕುಪ್ಪಳಿಸಿದರು. ಈ ವೇಳೆ ಹಿಮ್ಮಡಿಗೆ ಗಾಯವಾಗಿದೆ. ಇದರಿಂದಾಗಿ ಸೆಮಿಫೈನಲ್‌ನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಅತ್ತ ಇದರ ಸ್ಪಷ್ಟ ಲಾಭ ಪಡೆದ ಬ್ರಿಟನ್‌ನ ಪ್ಯಾಟ್ ಮ್ಯಾಕೋರ್ಮೆಕ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಬಳಿಕ ಏಡನ್ ಅವರನ್ನು ವೀಲ್ ಚೇರ್ ಸಹಾಯದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ಐರ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ. ಹಾಗಿದ್ದರೂ ಸೆಮಿಫೈನಲ್ ಸಾಧನೆ ಮಾಡಿರುವ ಏಡನ್ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು