ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics ಆರ್ಚರಿ | ಅನುಭವಿ ತಾರೆ ತರುಣ್‌ದೀಪ್ ರಾಯ್ ಪಯಣ ಅಂತ್ಯ

ಅಕ್ಷರ ಗಾತ್ರ

ಟೋಕಿಯೊ: ಬಹುತೇಕ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಹಿರಿಯ ಅನುಭವಿ ಬಿಲ್ಲುಗಾರ ತರುಣ್‌ದೀಪ್ ರಾಯ್, ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸುವ ಮೂಲಕ ಪಯಣ ಅಂತ್ಯಗೊಳಿಸಿದ್ದಾರೆ.

ಯುಮೆನೋಶಿಮಾ ಪಾರ್ಕ್‌ನಲ್ಲಿ ಬೀಸುವ ಗಾಳಿಯ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಲ್ಲೂ ನಿಖರ ಗುರಿಯಿಟ್ಟ ತರುಣ್‌ದೀಪ್ ಹಾಗೂ ಎದುರಾಳಿ ಇಸ್ರೇಲ್‌ನ ಶೇನಿ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಒಂದು ಹಂತದಲ್ಲಿ 5-5ರ ಸಮಬಲ ಸಾಧಿಸಿದರೂ ಕೊನೆಗೆ 'ಶೂಟ್-ಆಫ್‌'ನಲ್ಲಿ 10-9ರಿಂದ ಪಂದ್ಯ ಬಿಟ್ಟುಕೊಟ್ಟರು.

ವಿಶ್ವ ನಂ. 92ನೇ ರ‍್ಯಾಂಕ್‌ನ ಶೇನಿ, ಮೊದಲ ಸುತ್ತಿನಲ್ಲಿ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಜಪಾನ್‌ನ ಮ್ಯೂಟೊ ಹಿರೋಕಿ ವಿರುದ್ಧ ಗೆಲುವು ದಾಖಲಿಸಿದ್ದರು.

37 ವರ್ಷದ ಯೋಧ ತರುಣ್‌ದೀಪ್, 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಇದೀಗ ಮೂರನೇ ಬಾರಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಒಲೆಕ್ಸಿ ಹನ್‌ಬಿನ್ ವಿರುದ್ಧ 6-4ರಿಂದ ಗೆಲುವು ದಾಖಲಿಸಿದ ತರುಣ್‌ದೀಪ್ ಭರವಸೆ ಮೂಡಿಸಿದ್ದರು. ಆದರೆ ತಮಗಿಂತಲೂ 15 ವರ್ಷ ಕಿರಿಯರಾದ ಇಸ್ರೇಲ್ ಬಿಲ್ಲುಗಾರನ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT