ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: 18 ಸಾವಿರ ಮಂದಿಗೆ ಲಸಿಕೆ

Last Updated 11 ಜೂನ್ 2021, 14:09 IST
ಅಕ್ಷರ ಗಾತ್ರ

ಟೋಕಿಯೊ: ರೆಫರಿಗಳು ಮತ್ತು ಸ್ವಯಂಸೇವಕರು ಒಳಗೊಂಡಂತೆ ಒಲಿಂಪಿಕ್ಸ್‌ನಲ್ಲಿ ಕಾರ್ಯನಿರ್ವಹಿಸುವ 18 ಸಾವಿರ ಮಂದಿಗೆ ಮುಂದಿನ ವಾರದಿಂದ ಕೋವಿಡ್‌–19ರ ಲಸಿಕೆ ಹಾಕಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಮುಂದೂಡಿರುವ ಒಲಿಂಪಿಕ್ಸ್ ಆರಂಭವಾಗಲು ಆರು ವಾರಗಳು ಬಾಕಿ ಇದ್ದು ಸ್ಥಳೀಯರ ವಿರೋಧದ ನಡುವೆಯೂ ಕೂಟವನ್ನು ನಡೆಸಲು ಆಯೋಜಕರು ಮುಂದಾಗಿದ್ದಾರೆ. ವೈರಸ್ ಹರಡುವ ಆತಂಕವೂ ಅವರನ್ನು ಕಾಡುತ್ತಿದೆ.

ಈ ನಡುವೆ ಜಪಾನ್‌ನಲ್ಲಿನಿಧಾನಗತಿಯಲ್ಲಿ ಸಾಗುತ್ತಿದ್ದ ಲಸಿಕೆ ನೀಡುವ ಕಾರ್ಯ ಈಗ ವೇಗ ಪಡೆದುಕೊಂಡಿದೆ. ಆದರೂ ನಾಲ್ಕು ಶೇಕಡಾ ಮಂದಿಗೆ ಮಾತ್ರ ಎರಡೂ ಡೋಸ್ ನೀಡಲು ಸಾಧ್ಯವಾಗಿದೆ. 13 ಶೇಕಡಾ ಮಂದಿ ಒಂದು ಡೋಸ್ ಪಡೆದುಕೊಂಡಿದ್ದಾರೆ.

‘ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಒಲಿಂಪಿಕ್ಸ್‌ಗೆ ಅವರನ್ನು ಸಜ್ಜುಗೊಳಿಸಲಾಗುವುದು. ಕ್ರೀಡಾಪಟುಗಳ ಜೊತೆ ನಿರಂತರವಾಗಿ ಹತ್ತಿರದಿಂದ ವ್ಯವಹರಿಸುವ ರೆಫರಿಗಳು, ಒಲಿಂಪಿಕ್‌ ಗ್ರಾಮದ ಸಿಬ್ಬಂದಿ, ಕಾರ್ಮಿಕರು ಮತ್ತು ಗುತ್ತಿಗೆದಾರರು, ವಿಮಾನನಿಲ್ದಾಣ ಸಿಬ್ಬಂದಿ, ಡೋಪ್ ಟೆಸ್ಟಿಂಗ್ ಅಧಿಕಾರಿಗಳು ಮತ್ತು ಸಹಾಯಕರಿಗೆ ಆದ್ಯತೆ ನೀಡಲಾಗುವುದು’ ಎಂದು ಟೋಕಿಯೊ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯಸ್ಥೆ ಸೀಕೊ ಹಾಶಿಮೊಟೊ ಅಭಿಪ್ರಾಯಪಟ್ಟಿದ್ದಾರೆ.

ಅಗತ್ಯವಿದ್ದರೆ ಹೆಚ್ಚುವರಿ 70 ಸಾವಿರ ಸ್ವಯಂ ಸೇವಕರಿಗೂ ಲಸಿಕೆ ನೀಡಲಾಗುವುದು. ಜೂನ್ 18ರಂದು ಅಭಿಯಾನ ಆರಂಭಗೊಳ್ಳಲಿದ್ದು ಕ್ರೀಡಾಕೂಟದ ಉದ್ಘಾಟನೆಗೆ ಕೆಲವೇ ದಿನಗಳ ಮೊದಲು ಎರಡನೇ ಡೋಸ್ ನೀಡಲಾಗುವುದು ಎಂದು ಅವರು ವಿವರಿಸಿದರು.

ಭಾರತ ತಂಡದಲ್ಲಿ ನೆರವು ಸಿಬ್ಬಂದಿಗೆ ಆದ್ಯತೆ

ನವದೆಹಲಿ (ಪಿಟಿಐ): ಒಲಿಂಪಿಕ್ಸ್‌ಗೆ ತೆರಳುವ ಭಾರತ ತಂಡದಲ್ಲಿ ಕೋಚ್‌, ಫಿಸಿಯೊ, ವೈದ್ಯರು ಸೇರಿದಂತೆ ಹೆಚ್ಚಿನ ನೆರವು ಸಿಬ್ಬಂದಿಗೆ ಆದ್ಯತೆ ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಶುಕ್ರವಾರ ತಿಳಿಸಿದೆ.

100 ಕ್ರೀಡಾಪಟುಗಳು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಇನ್ನೂ 25ರಿಂದ 35 ಮಂದಿ ಆಯ್ಕೆಯಾಗುವ ಸಾಧ್ಯತೆ ಇದೆ. ಕ್ರೀಡಾಪಟುಗಳು ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗುವ ನೆರವು ಸಿಬ್ಬಂದಿಯನ್ನು ಹೆಚ್ಚು ಸಂಖ್ಯೆಯಲ್ಲಿ ಕಳುಹಿಸಲಾಗುವುದು. ಅನಿವಾರ್ಯವಾಗಿದ್ದರೆ ಮಾತ್ರ ಇತರ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

ನಿಯಮದಂತೆ ತಂಡದೊಂದಿಗೆ ತೆರಳುವ ಸಿಬ್ಬಂದಿಯ ಸಂಖ್ಯೆ ಕ್ರೀಡಾಪಟುಗಳ ಸಂಖ್ಯೆಯ ಮೂರನೇ ಒಂದು ಭಾಗವನ್ನು ಮೀರುವಂತಿಲ್ಲ. ಕೋವಿಡ್ ಕಾರಣದಿಂದ ಜಪಾನ್ ಸರ್ಕಾರ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT