ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10000 ಮೀಟರ್‌ ಓಟದ ಸ್ಪರ್ಧೆ: ಆಳ್ವಾಸ್‌ ಕಾಲೇಜಿನ ಆದೇಶ್‌ಗೆ ಮೊದಲ ಕೂಟ ದಾಖಲೆ

10000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಮೂರು ಮಂದಿ ಕೂಟ ದಾಖಲೆ
Last Updated 4 ಜನವರಿ 2022, 19:31 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಆಳ್ವಾಸ್‌ ಕಾಲೇಜಿನ ಆದೇಶ್,81 ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರಷರ ಅಥ್ಲೆಟಿಕ್ಸ್ ಕೂಟದ 10,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಮೊದಲ ಕೂಟ ದಾಖಲೆ ಸ್ಥಾಪಿಸಿದರು. ಈ ಕೂಟದ ಮೊದಲ ದಿನದಲ್ಲಿ 10,000 ಮೀಟರ್‌ ಓಟದ ಸ್ಪರ್ಧೆಯ ಒಂದೇ ವಿಭಾಗದಲ್ಲಿ ಮೂರು ಕೂಟ ದಾಖಲೆಗಳು ಮೂಡಿರುವುದು ಕ್ರೀಡಾಕೂಟದ ಹೆಗ್ಗಳಿಕೆಯಾಗಿದೆ.

ಇನ್ನೊಂದು ಕೂಟ ದಾಖಲೆಯನ್ನು ಜನನಾಯಕ್‌ ಚಂದ್ರಶೇಖರ್‌ ವಿವಿಯ ಆರಿಫ್‌ ಅಲಿ,ಜೌನ್‌ಪುರ್‌ ವೀರ್‌ ಬಹದ್ದೂರ್‌ಸಿಂಗ್‌ ಪೂರ್ವಾಂಚಲ್‌ ವಿಶ್ವವಿದ್ಯಾಲಯದ ರಾಮ್‌ ವಿನೋದ್‌ ಯಾದವ್‌ ಮೂರನೇ ಕೂಟ ದಾಖಲೆ ಸ್ಥಾಪಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಮಂಗಳವಾರ ಮೊದಲ ದಿನದ ಈ ಕೂಟದಲ್ಲಿ, ಆದೇಶ್ 10000 ಮೀಟರ್‌ ಓಟದ ಸ್ಪರ್ಧೆಯನ್ನು 29 ನಿಮಿಷ, 15.46 ಸೆಕೆಂಡುಗಳ ದಾಖಲೆ ಅವಧಿಯಲ್ಲಿ ಪೂರೈಸಿದರು. ಈ ಹಿಂದಿನ ದಾಖಲೆ, ಮಂಗಳೂರು ವಿಶ್ವವಿದ್ಯಾಲಯದ ನಾಗೇಂದ್ರ ಪ್ರತಾಪ್‌ ಸಿಂಗ್‌ (ಕಾಲ: 29 ನಿಮಿಷ 42.19 ಸೆ) ಹೆಸರಿನಲ್ಲಿತ್ತು.

ಜನನಾಯಕ್‌ ಚಂದ್ರಶೇಖರ್‌ ವಿವಿಯ ಆರಿಫ್‌ ಅಲಿ(29 ನಿಮಿಷ 18.82 ಸೆಕೆಂಡು) ಎರಡನೇ ಸ್ಥಾನ, ಜೌನ್‌ಪುರ್‌ ವೀರ್‌ ಬಹದ್ದೂರ್‌ಸಿಂಗ್‌ ಪೂರ್ವಾಂಚಲ್‌ ವಿಶ್ವವಿದ್ಯಾಲಯದ ರಾಮ್‌ ವಿನೋದ್‌ ಯಾದವ್‌(29 ನಿಮಿಷ 27.45 ಸೆ) ಮೂರನೇ ಸ್ಥಾನ ಪಡೆದರು.

ಫೈನಲ್‌ಗೆ ಅರ್ಹತೆ ಪಡೆದವರ ವಿವರ:

ಪುರುಷರ ವಿಭಾಗ: 100 ಮೀ ಓಟ: ಅಮಿತ್‌ ತಿವಾರಿ (ಗುರುನಾನಾಕ್‌ ವಿವಿ), ತಮಿಲರಸು ಎಸ್ (ಭರತೀರ್‌ ವಿವಿ ಕೊಯಿಮುತ್ತೂರು), ವಿಘ್ನೇಷ್‌ (ಮಂಗಳೂರು ವಿವಿ), ಅಮ್ಲಾನ್‌ ಬೋರ್‌ಗೊಹನ್‌ (ಕಳಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರೀಯಲ್‌ ಟೆಕ್ನಾಲಜಿ ಡೀಮ್ಡ್‌ ವಿವಿ), ಗುರು ಪ್ರಣವ್‌ ( ಸಾವಿತ್ರಿಬಾಯಿ ಫುಲೆ ವಿವಿ), ಅಮನ್‌ ಖೋಖರ್‌(ಮಹರ್ಷಿ ದಯಾನಂದ ವಿವಿ), ಶಶಿಕಾಂತ್‌( ಬೆಂಗಳೂರು ವಿವಿ), ಅರುಣ್‌ ಕುಮಾರ್‌ ಸಿ,(ಭರತೀರ್‌ ವಿವಿ ಕೊಯಿಮುತ್ತೂರು)

ಎತ್ತರ ಜಿಗಿತ: ಉಚ್ಚಹಾಲ್‌ ಕುಮಾರ್‌( ಅಡಮಾಸ್‌ ವಿವಿ ಕೊಲ್ಕತ್ತ), ಎಸ್‌. ಪೆದಕಾಮ ರಾಜು(ಆಚಾರ್ಯ ನಾಗಾರ್ಜುನ ವಿವಿ), ಮಹ್ಮದ್‌ ಅಸರ್ಫ್‌ ಅಲಿ(ನಾರ್ಥ ಬೆಂಗಾಲ್‌ ವಿವಿ), ದೇವ ಕಾರ್ತಿಕ(ಮದ್ರಾಸ ವಿವಿ), ಅರವಿಂದ(ಮದ್ರಾಸ್‌ ವಿವಿ) ಮೊಹಮ್ಮದ್‌ ಜಾಸೀಮ್‌(ಕ್ಯಾಲಿಕಟ್‌ ವಿವಿ), ಕೌಶಿಕ್‌ ಜಾದವ್‌( ಮಹಾರಾಜ ಸಯಾಜಿರಾವ್‌ ವಿವಿ), ಸ್ವದೀನ್‌ ಕುಮಾರ್‌ ಎಂ.(ಸಂಬಲಪುರ ವಿವಿ ಓಡಿಸಾ), ದಿಲಶಿತ್‌ ಟಿ.ಎನ್‌ ( ಮಹಾತ್ಮ ಗಾಂಧಿ ವಿವಿ)

ಟ್ರಿಪಲ್‌ ಜಂಪ್‌: ಕೃಷ್ಣ ಸಿಂಗ್‌( ಮುಂಬೈ ವಿವಿ), ಎಸ್‌. ರಾಬಿನ್‌ಸನ್‌(ಮದುರೈ ಕಾಮರಾಜ್‌ ವಿವಿ), ಖುಷವಿಂದ್ರ( ಸಂತ ಬಾಬಾ ಭಾಗ್‌ಸಿಂಗ್‌ ವಿವಿ), ಜಯ ಶಾ ಪ್ರದೀಪ್‌(ಮಂಗಳೂರು ವಿವಿ), ಪ್ರಭಾಕರನ್‌ ವಿ( ಕುವೆಂಪು ವಿವಿ ಶಿವಮೊಗ್ಗ), ಸುರೇಶ್‌ (ಮದ್ರಾಸ್‌ ವಿವಿ),

400 ಮೀಟರ್‌ ಓಟ: ಅನೌಜ್ ಯಾದವ್‌(ಮುಂಬೈ ವಿವಿ), ಸಂಕಾಲಿಯಾ ವಿಶಾ(ಸರ್ದಾರ್‌ ಪಟೇಲ್‌ ವಿವಿ), ನತೀನ್‌ ಕುಮಾರ್‌( ಚೌಧರಿ ಚರಣ್‌ಸಿಂಗ್‌ ಯೂನಿವರ್‌ ಸಿಟಿ ಮೀರತ್‌), ನಿಹಾಲ್‌ ಜೋಲ್‌(ಮಂಗಳೂರು ವಿವಿ), ಸುರೇಂದ್ರ ಎಸ್‌(ಭರತೀರ್‌ ವಿವಿ ಕೊಯಿಮುತ್ತೂರು), ಮಹಾಂತೇಶ್‌ ಸಿದ್ದ(ಮಂಗಳೂರು ವಿವಿ),

ಜಾವಲಿನ್‌ ಥ್ರೋ: ವಿಕ್ರಾಂತ್‌ ಮಲಿಕ್‌, ಸಚಿನ್‌ ಯಾದವ್‌( ಮಂಗಳೂರು ವಿವಿ) ಜಯ ಕುಮಾರ್‌ , ಕುನ್ವರ್‌ ಅಜಾಯೈ ರಾಜ್‌(ಲವ್ಲಿ ಪ್ರೊಫೆಸನಲ್‌ ವಿವಿ), ಯಶ್ವಿರ್‌ ಸಿಂಗ್‌ (ಮಹರ್ಷಿ ದಯಾನಂದ ವಿವಿ), ಅನ್ಮೊಲ್‌ ರಾಣಾ(ಪಂಜಾಬ್ ವಿವಿ ಚಂಡೀಗಡ್‌), ಹರೀಶ್‌ ಕುಮಾರ್‌ ಮಹಾರಾಜಾ ಗಂಗಾ ಸಿಂಗ್‌ ವಿವಿ), ಎ.ವಿ.ಜಿ. ಕೃಷ್ಣಮ್‌(ಆಚಾರ್ಯ ನಾಗಾರ್ಜುನ ವಿವಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT