ಭಾನುವಾರ, ನವೆಂಬರ್ 29, 2020
24 °C

ಅಭ್ಯಾಸದಲ್ಲಿ ಮಿಂಚಿದ ಮ್ಯಾಕ್ಸ್ ವರ್ಸ್ಟ್ಯಾಪನ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಇಸ್ತಾನ್‌ಬುಲ್‌: ರೆಡ್‌ಬುಲ್‌ ತಂಡದ ಚಾಲಕ ಮ್ಯಾಕ್ಸ್ ವರ್ಸ್ಟ್ಯಾಪನ್‌ ಅವರು ಟರ್ಕಿಶ್‌ ಗ್ರ್ಯಾನ್‌ಪ್ರಿ ಫಾರ್ಮುಲಾ ಒನ್‌ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನ ಅಭ್ಯಾಸದಲ್ಲಿ ಮೊದಲ ಸ್ಥಾನ ಪಡೆದರು.

ಶನಿವಾರ ಚಳಿ ಹಾಗೂ ಮಳೆಯ ನಡುವೆಯೂ ನಡೆದ ಸ್ಪರ್ಧೆಯಲ್ಲಿ ಅವರು ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲೆರ್ಕ್‌ ಅವರನ್ನು ಮ್ಯಾಕ್ಸ್ ಹಿಂದಿಕ್ಕಿದರು.

ಲೆಕ್ಲೆರ್ಕ್‌ ಅವರಿಗಿಂತ 94 ಸೆಕೆಂಡುಗಳಷ್ಟು ವೇಗವಾಗಿ ಅವರು ಗುರಿ ಮುಟ್ಟಿದರು. ರೆಡ್‌ಬುಲ್‌ ತಂಡದ ಸಹ ಚಾಲಕ ಅಲೆಕ್ಸಾಂಡರ್‌ ಅಲ್ಬೊನ್‌ ಮೂರನೇ ಸ್ಥಾನ ಗಳಿಸಿದರು. ಫ್ರಾನ್ಸ್‌ನ ಈಸ್ಟ್‌ಬೆನ್‌ ಒಕೊನ್‌ ನಾಲ್ಕನೇ ಹಾಗೂ ಲ್ಯಾಂಡೊ ನ್ಯಾರಿಸ್‌ ಐದನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು