ಗುರುವಾರ , ಜೂಲೈ 9, 2020
23 °C

ಒಲಿಂಪಿಕ್ಸ್‌ ಪದಕ ಗೆಲ್ಲುವತ್ತ ಚಿತ್ತ: ಮನದೀಪ್‌ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ನಮ್ಮ ತಂಡ ಚಿತ್ತ ನೆಟ್ಟಿದೆ’ ಎಂದು ಭಾರತ ಹಾಕಿ ತಂಡದ ಸ್ಟ್ರೈಕರ್‌ ಮನದೀಪ್‌ ಸಿಂಗ್‌ ಹೇಳಿದ್ದಾರೆ. 

‘ಇದು ಒಲಿಂಪಿಕ್‌ ವರ್ಷ; ಕೂಟಕ್ಕೆ ಅರ್ಹತೆ ಗಳಿಸಲು ಒಂದು ತಂಡವಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಟೋಕಿಯೊನಲ್ಲಿ ಪದಕ ಒಲಿಸಿಕೊಳ್ಳುವ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡುತ್ತೇವೆ’ ಎಂದು ಹೇಳಿದರು.

‘ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿಯನ್ನು ನಾನು ಎಂದೂ ಪಡೆದಿರಲಿಲ್ಲ. ಆದರೆ ಬಯಸಿದ್ದೆ. ಧನರಾಜ್‌ ಪಿಳ್ಳೈ ನನಗೆ ಆದರ್ಶ. ಅವರಿಂದ ಪ್ರಶಸ್ತಿ ಸ್ವೀಕರಿಸಿರುವುದು ಇನ್ನೂ ವಿಶೇಷ. ಪ್ರೋತ್ಸಾಹಧನವು ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ. ಹಾಕಿ ಇಂಡಿಯಾ ಆಡಳಿತ ಮಂಡಳಿ ನಮ್ಮ ಪ್ರಯತ್ನ ಗುರುತಿಸಿರುವುದಕ್ಕೆ ಸಂತಸವಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು