ಸೋಮವಾರ, ಸೆಪ್ಟೆಂಬರ್ 16, 2019
21 °C
ದಕ್ಷಿಣ ಕೊರಿಯಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ

ರಾಣಿ ರಾಂಪಾಲ್‌ಗೆ ನಾಯಕತ್ವ

Published:
Updated:
Prajavani

ನವದೆಹಲಿ : ಸ್ಟ್ರೈಕರ್‌ ರಾಣಿ ರಾಂಪಾಲ್‌ ಅವರು ಇದೇ 20ರಿಂದ ನಡೆಯುವ ದಕ್ಷಿಣ ಕೊರಿಯಾ ಎದುರಿನ ಮೂರು ಪಂದ್ಯಗಳ ಹಾಕಿ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಕೊರಿಯಾ ಪ್ರವಾಸಕ್ಕೆ ಹಾಕಿ ಇಂಡಿಯಾ (ಎಚ್‌ಐ) ಶುಕ್ರವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಗೋಲ್‌ಕೀಪರ್‌ ಸವಿತಾ ಅವರು ಉಪ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. 

ಜೂನ್ 15ರಿಂದ 23ರವರೆಗೆ ಜಪಾನ್‌ನ ಹಿರೋಶಿಮಾದಲ್ಲಿ ಎಫ್‌ಐಎಚ್‌ ಮಹಿಳಾ ಸೀರಿಸ್‌ ಫೈನಲ್ಸ್‌ ಟೂರ್ನಿ ನಡೆಯಲಿದೆ. ಇದಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ದಕ್ಷಿಣ ಕೊರಿಯಾ ಎದುರಿನ ಸರಣಿ ಭಾರತದ ಆಟಗಾರ್ತಿಯರಿಗೆ ವೇದಿಕೆ ಎನಿಸಿದೆ.

‘ರಾಣಿ ಮತ್ತು ಗುರ್ಜೀತ್‌ ಕೌರ್ ಅನುಭವಿಗಳು. ಅವರು ತಂಡಕ್ಕೆ ಮರಳಿದ್ದು ಖುಷಿ ನೀಡಿದೆ. ದಕ್ಷಿಣ ಕೊರಿಯಾ ಎದುರು ಆಡಲು ಇವರು ಫಿಟ್‌ ಆಗಿದ್ದಾರೆ. ಎಫ್‌ಐಎಚ್‌ ಸೀರಿಸ್‌ ಫೈನಲ್ಸ್‌ಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ದಕ್ಷಿಣ ಕೊರಿಯಾ ಎದುರಿನ ಸರಣಿ ನಮ್ಮ ಆಟಗಾರ್ತಿಯರಿಗೆ ವೇದಿಕೆ ಎನಿಸಿದೆ. ಕೊರಿಯಾ ಎದುರು ಸರಣಿ ಗೆದ್ದು ಮನೋಬಲ ಹೆಚ್ಚಿಸಿಕೊಳ್ಳುವುದು ನಮ್ಮ ಗುರಿ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ಹೇಳಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಸವಿತಾ (ಉಪ ನಾಯಕಿ) ಮತ್ತು ರಜನಿ ಎತಿಮರ್ಫು.

ಡಿಫೆಂಡರ್‌ಗಳು: ಸಲೀಮಾ ಟೆಟೆ, ಸುನಿತಾ ಲಾಕ್ರಾ, ದೀಪ್‌ ಗ್ರೇಸ್‌ ಎಕ್ಕಾ, ಕರೀಷ್ಮಾ ಯಾದವ್‌, ಗುರ್ಜೀತ್‌ ಕೌರ್‌ ಮತ್ತು ಸುಶೀಲಾ ಚಾನು.

ಮಿಡ್‌ಫೀಲ್ಡರ್‌ಗಳು: ಮೋನಿಕಾ, ನವಜೋತ್‌ ಕೌರ್‌, ನಿಕ್ಕಿ ಪ್ರಧಾನ್‌, ನೇಹಾ ಗೋಯಲ್‌ ಮತ್ತು ಲಿಲಿಮಾ ಮಿಂಜ್‌.

ಫಾರ್ವರ್ಡ್‌ಗಳು: ರಾಣಿ ರಾಂಪಾಲ್ (ನಾಯಕಿ), ವಂದನಾ ಕಟಾರಿಯಾ, ಲಾಲ್ರೆಮ್‌ಸಿಯಾಮಿ, ಜ್ಯೋತಿ ಮತ್ತು ನವನೀತ್‌ ಕೌರ್‌.

Post Comments (+)