ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಜ - ಕಾಲುಗಳ ಬಲಕ್ಕೆ ವೀರ ಭದ್ರಾಸನ

Last Updated 19 ಜೂನ್ 2019, 16:43 IST
ಅಕ್ಷರ ಗಾತ್ರ

ವೀರ ಎಂದರೆ ಶಕ್ತಿಯುತ ನಾಯಕ. ಯೋಧ ಎಂದರೆ ಧೈರ್ಯಶಾಲಿ. ಭದ್ರಾ ಎಂದರೆ ಮಂಗಳಕರ ಸ್ನೇಹಿತ. ಆಸನ ಎಂದರೆ ಭಂಗಿಯು ದೇಹದ ನಿಲುಮೆಯಾಗಿದೆ. ಇದು ಯೋಗದ ಆಕರ್ಷಕ ಭಂಗಿಯಾಗಿದೆ. ಈ ಆಸನವು ಪರಮೇಶ್ವರನ ಜಡೆಯ ಬಡಿತದಿಂದ ಉದಯಿಸಿದ ವೀರಭದ್ರ ದೇವರ ಹೆಸರಿನಿಂದ ಪ್ರಸಿದ್ಧವಾಗಿದೆ. ಇದಕ್ಕೆ ಸಾಮಾನ್ಯವಾಗಿ ವಾರಿಯಾರ್ ಪೋಸ್ ಎಂದು ಕರೆಯಲಾಗುತ್ತದೆ. ಈ ಆಸನಕ್ಕೆ ಶಕ್ತಿ ಮತ್ತು ಸ್ಥಿರತೆ ಅಗತ್ಯವಾಗಿರುತ್ತದೆ.

ಅಭ್ಯಾಸ ಕ್ರಮ: ಪ್ರಥಮವಾಗಿ ತಾಡಾಸನದಲ್ಲಿ ನಿಲ್ಲಿರಿ. ಆ ಮೇಲೆ 3-4 ಅಡಿಗಳಷ್ಟು ಇರುವಂತೆ ಕಾಲುಗಳನ್ನು ವಿಸ್ತರಿಸಬೇಕು. ಕೈಗಳು ಭುಜಗಳ ಮಟ್ಟಕ್ಕೆ ನೇರವಾಗಿಸಿ. ಆನಂತರ ಬಲಕಾಲನ್ನು ಬಲ ಬದಿಗೆ 900 ಗಳಷ್ಟು ತಿರುಗಿಸಿ, ಎಡಗಾಲು ಸ್ವಲ್ಪ ಒಳಗಡೆ ಸರಿಸಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಬಲ ಮಂಡಿ ಬಾಗಿಸಿ ಎಡಗಾಲನ್ನು ನೇರವಾಗಿಸಿ ಮಂಡಿ ಬಿಗಿ ಮಾಡಿ. ಕಣ್ಣುಗಳಿಂದ ಬಲಕೈ ಬೆರಳುಗಳನ್ನು ನೋಡಿ. ಈ ಸ್ಥಿತಿಯಲ್ಲಿ 20-30 ಸೆಕೆಂಡುಗಳ ಕಾಲ ಸಮ ಉಸಿರಾಟ ನಡೆಸುತ್ತಾ ಆ ಮೇಲೆ ವಿರಮಿಸಿರಿ. ಹಾಗೂ ಇನ್ನೊಂದು ಬದಿಯಲ್ಲಿ ಇದೇ ರೀತಿ ಅಭ್ಯಸಿಸಿ ವಿರಮಿಸಬೇಕು. ಈ ರೀತಿ ಎರಡು ಮೂರು ಬಾರಿ ಅಭ್ಯಾಸ ನಡೆಸಿರಿ.
ಉಪಯೋಗಗಳು: ಎದೆ ಶ್ವಾಸಕೋಶಗಳು ಬಲಕ್ಕೆ ಮತ್ತು ಭುಜಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಭಾಗ ಬಲಗೊಳ್ಳುತ್ತದೆ. ಕಾಲುಗಳ ಮಾಂಸ ಖಂಡಗಳು ಚೆನ್ನಾಗಿ ಪಳಗಿ ಬಲಯುತವಾಗುತ್ತವೆ. ಕಾಲುಗಳ ನರದೋಷ ನಿವಾರಣೆಯಾಗಲು ಸಹಕಾರಿ. ಸೊಂಟದ ಮತ್ತು ಹೊಟ್ಟೆಯ ಒಳಗಿನ ಅಂಗಗಳು ಚೈತನ್ಯಭರಿತವಾಗಿ ಹುರುಪುಗೊಳ್ಳುತ್ತದೆ. ಬೆನ್ನು, ಭುಜ, ಹಾಗೂ ಕೈಗಳಿಗೆ ಮೃದುವಾದ ವ್ಯಾಯಾಮ ದೊರೆಯುತ್ತದೆ. ಜೀರ್ಣ ಕ್ರೀಯೆ ಸುಧಾರಣೆ ಈ ಆಸನದಿಂದ ತ್ರಾಣ ಹೆಚ್ಚುತ್ತದೆ. ಚಪ್ಪಟ್ಟೆ ಪಾದ, ಆಸ್ಟೀಯೊ ಪೊರೆಸಿಸ್, ವಾತ ನಿಯಂತ್ರಣಗೊಳ್ಳುತ್ತದೆ. ಧೈರ್ಯ ಶಾಂತಿ ಮತ್ತು ಮಂಗಳವನ್ನು ಉತ್ತೇಜಿಸುತ್ತದೆ. ಗರ್ಭಣಿ ಸ್ತ್ರೀಯರು (ಗುರು ಮಾರ್ಗದರ್ಶನದಲ್ಲಿ) ಅಭ್ಯಾಸ ಮಾಡಬಹುದು.

ವಿ.ಸೂ: ಅತಿಸಾರ, ತೀವ್ರ ರಕ್ತದೊತ್ತಡ, ಕತ್ತಿಗೆ ನೋವು ಇದ್ದವರು ಆಸನವನ್ನು ಅಭ್ಯಾಸ ಮಾಡುವುದು ಬೇಡ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT