ಗುರುವಾರ , ಜನವರಿ 30, 2020
22 °C

ಟೆನಿಸ್‌: ಬೆಲಿಂದಾ ಬೆನ್ಸಿಕ್‌ಗೆ ಗೆಲುವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಅಡಿಲೇಡ್ : ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಬೆಲಿಂದಾ ಬೆನ್ಸಿಕ್‌ ಈ ವರ್ಷದ ತಮ್ಮ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದಾರೆ. ಇಲ್ಲಿ ಸೋಮವಾರ ನಡೆದ ಅಡಿಲೇಡ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಬೆಲಿಂದಾ ರಷ್ಯಾದ ದಾರಿಯಾ ಕಸಟ್ಕಿನಾ ಎದುರು 6–4, 6–4ರಲ್ಲಿ ಗೆಲುವು ಸಾಧಿಸಿದರು.  

ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಅಲೆಕ್ಸ್ ಡಿ ಮಿನೌರ್ ಕಿಬ್ಬೊಟ್ಟೆಗೆ ಗಾಯವಾದ ಕಾರಣ ಟೂರ್ನಿಯಿಂದ ಹಿಂದೆ ಸರಿದರು.

ಪುರುಷರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಬ್ರಿಟನ್‌ನ ಡ್ಯಾನ್ ಇವಾನ್ಸ್ ಅರ್ಜೆಂಟೀನಾದ ಜುವಾನ್ ಇಗ್ನಾಷಿಯೊ ಲಾಂಡೆರೊ ವಿರುದ್ಧ 6–2, 6–4ರಲ್ಲಿ ಜಯ ಸಾಧಿಸಿದರು. ಜೆರೆಮಿ ಚಾರ್ಡಿ 6–3, 7–5ರಲ್ಲಿ ಫ್ರಾನ್ಸ್‌ನ ಗಿಲೆಸ್‌ ಸಿಮೊನ್ ಎದುರು ಜಯ ಗಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು