ಭಾನುವಾರ, ಜೂನ್ 20, 2021
29 °C

ಆಸ್ಟ್ರೇಲಿಯಾ ಓಪನ್‌ ಟೆನಿಸ್: ಹಾಲಿ ಚಾಂಪಿಯನ್‌ಗೆ ಸೋಲುಣಿಸಿದ 15ರ ಆಟಗಾರ್ತಿ ಗಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬೋರ್ನ್‌: ಹಾಲಿ ಚಾಂಪಿಯನ್‌ ನವೊಮಿ ಒಸಾಕ ಅವರನ್ನು ಮಣಿಸುವುದರೊಂದಿಗೆ ಬಲಿಷ್ಠ ಎದುರಾಳಿಗಳೆದುರು ಜಯದ ಓಟ ಮುಂದುವರಿಸಿರುವ 15ರ ಆಟಗಾರ್ತಿ ಕೊಕೊ ಗಫ್‌, ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ.

ವಿಶ್ವ ರ‌್ಯಾಂಕಿಂಗ್‌ನಲ್ಲಿ ನಂ.3 ಶ್ರೇಯಾಂಕದಲ್ಲಿರುವ ಜಪಾನ್‌ನ ಒಸಾಕ ಎದುರು ಕಳೆದ ವರ್ಷ ಯುಎಸ್‌ ಓಪನ್‌ನಲ್ಲಿ ಪರಾಭವಗೊಂಡಿದ್ದ ಗಫ್‌, ಈ ಬಾರಿ 6–3, 6–4 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಈ ಸೆಣಸಾಟ 67 ನಿಮಿಷಗಳ ಕಾಲ ನಡೆಯಿತು.

ಅಮೆರಿಕದ ಗಫ್‌, ಏಳು ಬಾರಿ ಗ್ರ್ಯಾನ್‌ಸ್ಲಾಮ್‌ ವಿಜೇತೆ ತಮ್ಮದೇ ದೇಶದ ವೀನಸ್‌ ವಿಲಿಯಮ್ಸ್ ಅವರನ್ನು 7–6, 6–3 ನೇರ ಅಂತರದಿಂದ ಸೋಮವಾರ ಮಣಿಸಿದ್ದರು. ಬುಧವಾರ ರುಮೇನಿಯಾದ ಸೊರಾನಾ ಸಿರ್ಸ್ಟಿಯಾ ವಿರುದ್ಧ 4–6, 6–3, 7–3 ಅಂತರದಿಂದ ಗೆದ್ದು ಬೀಗಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ವೀನಸ್‌ಗೆ ಆಘಾತ ನೀಡಿದ ಗಫ್‌

ಈ ಟೂರ್ನಿಯಲ್ಲಿ ಏಳು ಬಾರಿ ಚಾಂಪಿಯನ್‌ ಆಗಿದ್ದ ಸರೇನಾ ವಿಲಿಯಮ್ಸ್‌ ಮತ್ತು 2017, 2018ರಲ್ಲಿ ಚಾಂಪಿಯನ್‌ ಆಗಿದ್ದ ಡೆನ್ಮಾರ್ಕ್‌ ಆಟಗಾರ್ತಿ ಕರೋಲಿನಾ ವೋಜ್ನಿಯಾಕಿ ಇದೇ ದಿನ ಸೋಲುಕಂಡಿದ್ದರು.

ಸರೇನಾ ಚೀನಾದ ವಾಂಗ್ ಕಿಯಾಂಗ್ ಎದುರು 6–4, 6–7, 7–5 ಅಂತರದಿಂದ ಮತ್ತು ಕರೋಲಿನಾ, ಟ್ಯುನೇಷಿಯಾದ ಒನಸ್ ಜುಬೇರ್‌ ವಿರುದ್ಧ 7–5, 3–6, 7–5 ಅಂತರದಿಂದ ಸೋಲುಕಂಡರು. ಈ ಸೋಲಿನ ಬಳಿಕ ಕರೋಲಿನಾ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು