ಗುರುವಾರ , ಜುಲೈ 7, 2022
23 °C
ಮಹಾರಾಷ್ಟ್ರದಲ್ಲಿ ಟಾಟಾ ಓಪನ್ ಇಂದಿನಿಂದ

ಟೆನಿಸ್‌ ಟೂರ್ನಿ: ಬೋಪಣ್ಣ– ರಾಮ್‌ಕುಮಾರ್‌ಗೆ ಎರಡನೇ ಶ್ರೇಯಾಂಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಜೋಡಿಯು ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಟೂರ್ನಿಯು ಸೋಮವಾರ ಇಲ್ಲಿ ಆರಂಭವಾಗಲಿದೆ.

ಆಸ್ಟ್ರೇಲಿಯನ್ ಓಪನ್‌ಗೂ ಮುನ್ನ ಅಡಿಲೇಡ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಬೋಪಣ್ಣ ಮತ್ತು ರಾಮ್‌ಕುಮಾರ್ ಅವರು ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಅಮೆರಿಕದ ಅನುಭವಿ ಜೋಡಿಯಾದ ಜೇಮಿ ಸೆರೆಟಾನಿ ಮತ್ತು ನಿಕೋಲಸ್ ಮನ್ರೋ ವಿರುದ್ಧ ಕಣಕ್ಕಿಳಿಯುವರು.

ಆಸ್ಟ್ರೇಲಿಯಾದ ಲ್ಯೂಕ್ ಸೆವಿಲ್ಲೆ ಮತ್ತು ಜಾನ್ ಪ್ಯಾಟ್ರಿಕ್ ಸ್ಮಿತ್ ಅವರಿಗೆ ಅಗ್ರಶ್ರೇಯಾಂಕ ನೀಡಲಾಗಿದೆ.

ಬೋಪಣ್ಣ ಮತ್ತು ರಾಮ್‌ಕುಮಾರ್ ಹೊರತುಪಡಿಸಿ, ಡಬಲ್ಸ್‌ನಲ್ಲಿ ಭಾರತದ ಮತ್ತೆರಡು ಜೋಡಿಗಳು ಕಾಣಿಸಿಕೊಳ್ಳಲಿವೆ. ಯೂಕಿ ಭಾಂಬ್ರಿ–ದಿವಿಜ್ ಶರಣ್, ಸ್ಥಳೀಯ ಆಟಗಾರ ಅರ್ಜುನ್ ಖಾಡೆ–ಪುರವ್ ರಾಜಾ ಅವರೊಂದಿಗೆ ವೈಲ್ಡ್ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ರಾಮ್‌ಕುಮಾರ್, ಯೂಕಿ, ಅರ್ಜುನ್‌ ಮತ್ತು ಪ್ರಜ್ಞೇಶ್ ಗುಣೇಶ್ವರನ್ ಆಡಲಿದ್ದಾರೆ. ಈ ವಿಭಾಗದಲ್ಲಿ ಮುಕುಂದ್ ಶಶಿಕುಮಾರ್ ಮತ್ತು ಮನೀಷ್ ಸುರೇಶ್‌ ಕುಮಾರ್ ಅವರಿಗೆ ವೈಲ್ಡ್‌ಕಾರ್ಡ್‌ ಸಿಕ್ಕಿದೆ.

ಅರ್ಹತಾ ಸುತ್ತಿನ ಪಂದ್ಯಗಳು ಭಾನುವಾರದಿಂದಲೇ ಆರಂಭವಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು