ಬ್ರಿಸ್ಬೇನ್: ಜಪಾನ್ನ ನವೊಮಿ ಒಸಾಕ ಮತ್ತು ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರು ಬ್ರಿಸ್ಬೇನ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪ್ಯಾಟ್ ರ್ಯಾಪ್ಟರ್ ಅರೇನಾದಲ್ಲಿ ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಒಸಾಕ 6–3, 3–6, 6–3ರಲ್ಲಿ ಕಿಕಿ ಬರ್ಟನ್ಸ್ ವಿರುದ್ಧ ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಒಸಾಕ ಮೊದಲ ಸೆಟ್ನಲ್ಲಿ ಸುಲಭವಾಗಿ ಎದುರಾಳಿಯ ಸವಾಲು ಮೀರಿದರು. ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಬರ್ಟನ್ಸ್ ಎರಡನೇ ಸೆಟ್ನಲ್ಲಿ ತಿರುಗೇಟು ನೀಡಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್ನಲ್ಲಿ ಒಸಾಕ ಮೋಡಿ ಮಾಡಿದರು. ಮೊದಲ ಆರು ಗೇಮ್ಗಳಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಅವರು ನಂತರ ಮೇಲುಗೈ ಸಾಧಿಸಿದರು. ಉಭಯ ಆಟಗಾರ್ತಿಯರ ನಡುವಣ ಈ ಹೋರಾಟ ಎರಡು ಗಂಟೆ ನಡೆಯಿತು.

ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಆಟಗಾರ್ತಿ ಕ್ವಿಟೋವಾ 6–4, 6–2ರಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ಎದುರು ಜಯಿಸಿದರು.

ಇತರ ಪಂದ್ಯಗಳಲ್ಲಿ ಕ್ಯಾರೋಲಿನಾ ಪ್ಲಿಸ್ಕೋವಾ 7–6, 6–3ರಲ್ಲಿ ಅಲಿಸನ್ ರಿಸ್ಕೆ ಎದುರೂ, ಮ್ಯಾಡಿಸನ್ ಕೀಸ್ 6–4, 6–1ರಲ್ಲಿ ಡೇನಿಯಲ್ ಕಾಲಿನ್ಸ್ ವಿರುದ್ಧವೂ ವಿಜೇತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.