ಮಂಗಳವಾರ, ಮಾರ್ಚ್ 28, 2023
31 °C

ಆಕ್ಲಂಡ್‌ ಓಪನ್ ಟೆನಿಸ್‌ ಟೂರ್ನಿ: ರಿಚರ್ಡ್‌ಗೆ ಪ್ರಶಸ್ತಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಆಕ್ಲಂಡ್: ಫ್ರಾನ್ಸ್‌ನ ರಿಚರ್ಡ್‌ ಗಾಸ್ಕೆಟ್‌ ಅವರು ಆಕ್ಲಂಡ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.

ಇಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಿಚರ್ಡ್‌ 4-6, 6-4, 6-4ರಿಂದ ಬ್ರಿಟನ್‌ನ ಕ್ಯಾಮರಾನ್ ನೊರಿ ಎದುರು ಗೆದ್ದರು. ಮೊದಲ ಸೆಟ್‌ನಲ್ಲಿ ಸೋತ ಅವರು ಬಳಿಕ ಪುಟಿದೆದ್ದರು. ರಿಚರ್ಡ್‌ ಅವರಿಗೆ ಐದು ವರ್ಷಗಳಲ್ಲಿ ಇದು ಮೊದಲ ಪ್ರಶಸ್ತಿಯಾಗಿದೆ.

ಕೂನ್ ಚಾಂಪಿಯನ್‌: ಅಡಿಲೇಡ್‌ನಲ್ಲಿ ನಡೆದ ಅಡಿಲೇಡ್‌ ಇಂಟರ್‌ನ್ಯಾಷನಲ್‌ ಎರಡನೇ ಟೂರ್ನಿಯಲ್ಲಿ ದಕ್ಷಿಣ ಕೊರಿಯಾದ ಕೂನ್‌ ಸೂನ್ ವೂ ಪ್ರಶಸ್ತಿ ಗೆದ್ದರು. ಫೈನಲ್‌ ಪಂದ್ಯದಲ್ಲಿ ಅವರು 6-4, 3-6, 7-6(4)ರಿಂದ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು