ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ ಗೋಲ್ಡನ್‌ ವೀಸಾ ಪಡೆದ 3ನೇ ಭಾರತೀಯ ಪ್ರಜೆ ಸಾನಿಯಾ ಮಿರ್ಜಾ

ಅಕ್ಷರ ಗಾತ್ರ

ದುಬೈ: ಭಾರತದ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ 'ದುಬೈ ಗೋಲ್ಡನ್‌ ವೀಸಾ' ದೊರೆತಿದೆ. ಈ ವೀಸಾ ಮೂಲಕ ಸಾನಿಯಾ ಮತ್ತು ಅವರ ಪತಿ, ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶೋಯಬ್‌ ಮಲಿಕ್‌ ಅವರು 10 ವರ್ಷಗಳ ವರೆಗೂ ಯುಎಇ ನಿವಾಸಿಯಾಗಬಹುದು.

ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌ ಮತ್ತು ಸಂಜಯ್‌ ದತ್‌ ನಂತರ ದುಬೈ ಗೋಲ್ಡನ್‌ ವೀಸಾ ಗೌರವಕ್ಕೆ ಪಾತ್ರರಾಗಿರುವ ಮೂರನೇ ಭಾರತೀಯ ವ್ಯಕ್ತಿ ಸಾನಿಯಾ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾನಿಯಾ 'ನನಗೆ ಮತ್ತು ನನ್ನ ಕುಟುಂಬಕ್ಕೆ ದುಬೈ ಅತ್ಯಂತ ಆಪ್ತವಾದ ಸ್ಥಳ. ಇದು ನನ್ನ ಎರಡೇ ಮನೆಯಿದ್ದಂತೆ, ಇಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದೇವೆ. ಈ ವೀಸಾ ಗೌರವ ಪಡೆದಿರುವ ಕೆಲವೇ ಭಾರತೀಯ ಪ್ರಜೆಗಳಲ್ಲಿ ನಾನೂ ಒಬ್ಬಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಟೆನಿಸ್ ಮತ್ತು ಕ್ರಿಕೆಟ್‌ ಅಕಾಡೆಮಿಗಳನ್ನು ಆರಂಭಿಸುವ ನಮ್ಮ ಯೋಜನೆಯ ಕುರಿತು ಕೆಲಸಗಳನ್ನು ಪೂರೈಸಲು ಇದರಿಂದ ಅವಕಾಶ ಸಿಕ್ಕಂತಾಗಿದೆ' ಎಂದಿದ್ದಾರೆ.

ಇದೇ ಸಮಯದಲ್ಲಿ ಯುಎಇ ಪ್ರಧಾನಿ ಶೇಖ್‌ ಮೊಹಮ್ಮದ್ ಬಿನ್‌ ರಶೀದ್ ಹಾಗೂ ಸರ್ಕಾರದ ಪ್ರಾಧಿಕಾರಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಸಾನಿಯಾ ಮತ್ತು ಶೋಯಬ್‌ ಅವರು ದುಬೈನಲ್ಲಿ ಟೆನಿಸ್‌ ಹಾಗೂ ಕ್ರಿಕೆಟ್‌ ತರಬೇತಿ ಅಕಾಡೆಮಿ ಆರಂಭಿಸುವ ಪ್ರಯತ್ನದಲ್ಲಿದ್ದಾರೆ. ಕೆಲವೇ ತಿಂಗಳಲ್ಲಿ ಅಕಾಡೆಮಿ ಶುರುವಾಗುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

ಜುಲೈ 23ರಿಂದ ಆರಂಭವಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ, ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಅಂಕಿತಾ ರೈನಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT