ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆನಿಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ನಗಾಲ್‌, ಹ್ಯೂಗೊ

Published 20 ಆಗಸ್ಟ್ 2024, 16:28 IST
Last Updated 20 ಆಗಸ್ಟ್ 2024, 16:28 IST
ಅಕ್ಷರ ಗಾತ್ರ

ಮುಂಬೈ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಮತ್ತು ಫ್ರಾನ್ಸ್‌ನ ಹ್ಯೂಗೊ ಗ್ಯಾಸ್ಟನ್ ಅವರು ಡಿಸೆಂಬರ್‌ 3ರಿಂದ 8ರವರೆಗೆ ನಡೆಯುವ ಆರನೇ ಟೆನಿಸ್ ಪ್ರೀಮಿಯರ್ ಲೀಗ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಇಂಡಿಯಾ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ವಿಶ್ವದ 41ನೇ ಕ್ರಮಾಂಕದ ಪೋಲೆಂಡ್‌ನ ಮ್ಯಾಗ್ಡಾ ಲಿನೆಟ್ ಮತ್ತು 52ನೇ ರ‍್ಯಾಂಕ್‌ನ ಅರ್ಮೇನಿಯಾದ ಎಲಿನಾ ಅವನೇಸ್ಯಾನ್ ಅವರು ಮಹಿಳಾ ವಿಭಾಗದಲ್ಲಿ ಕಣಕ್ಕೆ ಇಳಿಯಲಿರುವ ಪ್ರಮುಖ ತಾರೆಯರು.

ಎರಡು ತಂಡಗಳ ನಡುವಿನ ಪಂದ್ಯಗಳು ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಮಿಶ್ರ ಡಬಲ್ಸ್ ಮತ್ತು ಪುರುಷರ ಡಬಲ್ಸ್ ಅನ್ನು ಒಳಗೊಂಡಿರುತ್ತವೆ. ಪ್ರತಿ ವಿಭಾಗವು 25 ಅಂಕ ಸೇರಿದಂತೆ ಒಟ್ಟು 100 ಅಂಕಗಳನ್ನು ಹೊಂದಿರುತ್ತದೆ. ಟೂರ್ನಿಯಲ್ಲಿ ಬೆಂಗಳೂರು ಎಸ್‌ಜಿ ಮೇವರಿಕ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT