ಭಾನುವಾರ, ಏಪ್ರಿಲ್ 18, 2021
24 °C

ಟೆನಿಸ್‌: ಅಗ್ರ ಶ್ರೇಯಾಂಕಿತರಿಗೆ ‘ಅರ್ಹರ’ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಗ್ರ ಶ್ರೇಯಾಂಕಿತರು ಇಲ್ಲಿನ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿಯಲ್ಲಿ ಸೋಮವಾರ ಆರಂಭಗೊಂಡ ಎಐಟಿಎ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ‍ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಆಘಾತ ಅನುಭವಿಸಿದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದವರು ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದರು.

ಬಾಲಕರ ವಿಭಾಗದಲ್ಲಿ ರಾಜ್ಯದ ನಿನಾದ್ ರವಿ ಅವರನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ತಮಿಳುನಾಡು ಆಟಗಾರ ಅನಿರುದ್ಧ ಆದಿತ್ಯ 6–2, 6–2ರಲ್ಲಿ ಮಣಿಸಿದರೆ ಬಾಲಕಿಯರ ವಿಭಾಗದಲ್ಲಿ ಮೀನಾಕ್ಷಿ ಎಲ್ ಅವರನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಸೌಮ್ಯಾ ರೋನಡೆ 6-1, 6-1ರಲ್ಲಿ ಸೋಲಿಸಿದರು. 

ಫಲಿತಾಂಶಗಳು: ಬಾಲಕರು: ಅನಿರುದ್ಧ ಆದಿತ್ಯಗೆ ನಿನಾದ್ ರವಿ ವಿರುದ್ಧ 6-2, 6-2ರಲ್ಲಿ ಗೆಲುವು. ವಿಹಾನ್ ಗುಪ್ತಾಗೆ ಪರೀಕ್ಷಿತ್ ಸಿಂಗ್ ಎದುರು 6-0, 6-1ರಲ್ಲಿ ಜಯ. ಆಕಾಶ್‌ ವಿ.ಗಾಂವ್ಕರ್‌ಗೆ ಸಕ್ಷಮ್ ಅತ್ರೆ ವಿರುದ್ಧ 6-3, 6-2ರಲ್ಲಿ, ಮನನ್ ನಾಥ್‌ಗೆ ಆರ್ಯ ಸುಭಾಷ್ ವಿರುದ್ಧ 6-4, 6-1ರಲ್ಲಿ, ಸ್ಕಂದ ಪ್ರಸನ್ನ ರಾವ್‌ಗೆ ಕುಂಶ್ ಗೌಡ ವಿರುದ್ಧ 6-3, 6-3ರಲ್ಲಿ, ತರುಣ್ ವೆಟ್ರಿವೇಲನ್‌ಗೆ ಮನದೀಪ್ ಕುಡುಮಲ ವಿರುದ್ಧ 3-6, 6-2, 6-3ರಲ್ಲಿ ಗೆಲುವು.

ಋಷಿವರ್ಧನ್‌ಗೆ ತರುಣ್ ಕಾರವಾರ ವಿರುದ್ಧ 6-3, 3-6, 6-2ರಲ್ಲಿ, ಶಂತನು ನಂಬಿಯಾರ್‌ಗೆ ರಾಜೇಶ್ವರ್ ರೆಡ್ಡಿ ವಿರುದ್ಧ 6-2, 6-4ರಲ್ಲಿ, ಅದಿತ್‌ ಅಮರನಾಥ್‌ಗೆ ನಿತೀಶ್‌ ಬಾಲಾಜಿ ವಿರುದ್ಧ 6-2, 6-1ರಲ್ಲಿ, ಕೃಷ್ ಅಜಯ್ ತ್ಯಾಗಿಗೆ ಸುಶಾಂಕ್ ಎದುರು 6-7, 6-4, 6-3ರಲ್ಲಿ, ಗೋವಿನ್ ಸೆಹ್ವಾಗ್‌ಗೆ ರಕ್ಷಕ್ ತರುಣ್ ಎದುರು 6-1, 2-6, 6-2ರಲ್ಲಿ, ಕಾರ್ತಿಕ್ ಕವಿನ್‌ಗೆ ಜೈಶ್ನು ಎದುರು 2-6, 6-0, 6-4ರಲ್ಲಿ, ಭುವನ್ ಪ್ರಕಾಶ್‌ಗೆ ನೀಲ್‌ ಪಿಳ್ಳೈ ವಿರುದ್ಧ 7-6, 6-4ರಲ್ಲಿ, ರೆತಿನ್ ಪ್ರಣವ್‌ಗೆ ಪ್ರಿಯಾಶ್ ಸೋಳಂಕಿ ಎದುರು 6-1, 6-0ರಲ್ಲಿ, ಅನೂಪ್ ಕೇಶವಮೂರ್ತಿಗೆ ವಿಜಯ್‌ ರಾಜು ಎದುರು 6-2, 6-0ರಲ್ಲಿ, ಅರ್ಜುನ್ ಪ್ರೇಂ ಕುಮಾರ್‌ಗೆ ಅರ್ಜನ್ ಗುಪ್ತಾ ಎದುರು 6-3, 6-4ರಲ್ಲಿ ಗೆಲುವು.

ಮಹಿಳೆಯರ ವಿಭಾಗ: ಸೌಮ್ಯಾ ರೋನಡೆಗೆ ಮೀನಾಕ್ಷಿ ವಿರುದ್ಧ 6-1, 6-1ರಲ್ಲಿ, ಸಿರಿ ಪಾಟೀಲ್‌ಗೆ ಜೈನಾ ಸಲಾರ್‌ ವಿರುದ್ಧ 6-3, 6-3ರಲ್ಲಿ, ಸೋನಿಕಾ ಜಡೀಶ್‌ಗೆ ಮೋನಿಶಾ ದೇವರಕೊಂಡ ವಿರುದ್ಧ 6-1, 6-1ರಲ್ಲಿ, ಆಮೋದಿನಿ ವಿಜಯ್ ನಾಯಕ್‌ಗೆ ಸಮೃದ್ಧಿ ಪೊಕರ್ಣ ಎದುರು 6-2, 6-1ರಲ್ಲಿ, ಕಾಸ್ವಿ ಭಾಟಿಯಾಗೆ ಇಂಚರ ವಿರುದ್ಧ 7-6, 6-1ರಲ್ಲಿ, ಸಂಜನಾಗೆ ಸಿರಿ ಸುನಂದ ಸಂಪತ್ ವಿರುದ್ಧ 6-3, 1-6, 6-2ರಲ್ಲಿ, ಆತ್ಮಿಕಾ ಚೈತನ್ಯಗೆ ಶ್ರೀನಿಧಿ ರೆಡ್ಡಿ ವಿರುದ್ಧ 6-3, 6-3ರಲ್ಲಿ, ನಿಧಿ ಶ್ರೀನಿವಾಸ್‌ಗೆ ರಿಶಿತಾ ಅಗರವಾಲ್‌ ಎದುರು 6-0, 6-0ರಲ್ಲಿ ಮತ್ತು ಭಾರತಿಯಾನ ರೆಡ್ಡಿಗೆ ಸುಬ್ರತಾ ವಿರುದ್ಧ 6-2, 6-2ರಲ್ಲಿ ಜಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು