ಶುಕ್ರವಾರ, ಮೇ 29, 2020
27 °C

ಕೊರೊನಾದಿಂದ ಅಸಮಾನತೆ ಜಗಜ್ಜಾಹೀರು: ಬಿಲ್ಲಿ ಜೀನ್ ಕಿಂಗ್‌ 

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಕೊರೊನಾ ವೈರಾಣುವಿನಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಟೆನಿಸ್‌ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಟೆನಿಸ್‌ನಲ್ಲಿ ಮೊದಲಿನಿಂದಲೂ ಅಸಮಾನತೆ ಇದೆ. ಅದು ಈಗ ಜಗಜ್ಜಾಹೀರಾಗಿದೆ’ ಎಂದು ಹಿರಿಯ ಟೆನಿಸ್‌ ಆಟಗಾರ್ತಿ ಬಿಲ್ಲಿ ಜೀನ್‌ ಕಿಂಗ್‌ ಹೇಳಿದ್ದಾರೆ.

‘ನಮ್ಮಲ್ಲಿರುವ ವೈರುಧ್ಯಗಳನ್ನು ಮರೆತು ಏಕತೆ ಪ್ರತಿಪಾದಿಸಲು ಇದು ಸೂಕ್ತ ಸಮಯ. ಕೋವಿಡ್‌ ಬಿಕ್ಕಟ್ಟು ಬಗೆಹರಿದ ಬಳಿಕವೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ.

ಅಮೆರಿಕದ ಕಿಂಗ್‌ ಅವರು ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ 12, ಡಬಲ್ಸ್‌ನಲ್ಲಿ 16 ಹಾಗೂ ಮಿಶ್ರ ಡಬಲ್ಸ್‌ನಲ್ಲಿ 11 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. 

‘ಟೆನಿಸ್‌ ಸಂಸ್ಥೆಗಳು ಫುಟ್‌ಬಾಲ್‌ ಫೆಡರೇಷನ್‌ಗಳಷ್ಟು ಶ್ರೀಮಂತವಾಗಿಲ್ಲ. ಈ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸ್ಪಂದಿಸಬೇಕು’ ಎಂದೂ ತಿಳಿಸಿದ್ದಾರೆ.

‘ಟೆನಿಸ್‌ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಕೆಳ ಹಂತದ ಆಟಗಾರರು ಹಾಗೂ ಆಟಗಾರ್ತಿಯರು ಹಣಕಾಸಿನ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಎಲ್ಲರೂ ನೆರವಾಗಬೇಕು. ತಾರಾ ಆಟಗಾರರು ಆರ್ಥಿಕವಾಗಿ ಹೆಚ್ಚು ಸಶಕ್ತರಾಗಿದ್ದಾರೆ. ಅವರು ಸಹಾಯ ಹಸ್ತ ಚಾಚಲು ಮುಂದೆ ಬರಬೇಕು’ ಎಂದು 76 ವರ್ಷ ವಯಸ್ಸಿನ ಕಿಂಗ್‌ ನುಡಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು