ಮಂಗಳವಾರ, ಸೆಪ್ಟೆಂಬರ್ 21, 2021
23 °C

Tokyo Olympics | ಚಿನ್ನವಿಲ್ಲ, ಕನಿಷ್ಠ ಕಂಚಿನ ಪದಕ ಗೆಲ್ಲಲಾಗದ ಜೊಕೊವಿಚ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಒಲಿಂಪಿಕ್ಸ್‌ನ ಟೆನಿಸ್ ಕ್ರೀಡೆಯಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಾರೆಗಳಲ್ಲಿ ಓರ್ವರೆನಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕನಿಷ್ಠ ಕಂಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ನಡೆದ ಕಂಚಿನ ಪದಕದ ಸೆಣಸಾಟದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಜೊಕೊವಿಚ್, ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟಾ ವಿರುದ್ದ 6-4 6-7(6) 6-3ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ: 

 

 

 

ಈ ಮೊದಲು ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಶರಣಾಗಿರುವ ಜೊಕೊವಿಚ್ ಅವರ ‘ಗೋಲ್ಡನ್‌ ಗ್ರ್ಯಾನ್‌ಸ್ಲಾಮ್‌’ ಕನಸು ಭಗ್ನಗೊಂಡಿತ್ತು.

ಈಗ ಮಿಶ್ರ ಡಬಲ್ಸ್‌ನಲ್ಲಿ ಜೊಕೊವಿಚ್‌ಗೆ ಪದಕ ಗೆಲ್ಲುವ ಕೊನೆಯ ಅವಕಾಶವಿದೆ. ಇಂದೇ ಜೊಕೊವಿಚ್ ಹಾಗೂ ನೀನಾ ಸ್ಟೊಜಾನೊವಿಚ್‌ ಜೋಡಿ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು